ETV Bharat / city

ಕಸದಿಂದ ರಸ ತೆಗೆಯಲು ಮುಂದಾದ ಹು - ಧಾ ಪಾಲಿಕೆ: ಪ್ಲಾಸ್ಟಿಕ್ ತ್ಯಾಜ್ಯದಿಂದ ಆದಾಯ

ಎಲ್ಲೆಂದರಲ್ಲಿ ಎಸೆಯುವ ಕಸದಲ್ಲಿಯೇ ರಸ ತೆಗೆಯುವ ಬಗ್ಗೆ ಯೋಜನೆ ರೂಪಿಸುತ್ತಿರುವ ಹು - ಧಾ ಮಹಾನಗರ ಪಾಲಿಕೆ, ಇಂದೋರ್ ಮಾದರಿಯಲ್ಲಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.

author img

By

Published : Mar 4, 2021, 9:27 AM IST

Hubli-Dharwad muncile municipal
ಕಸದಿಂದ ರಸ ತೆಗೆಯಲು ಮುಂದಾದ ಹು-ಧಾ ಪಾಲಿಕೆ

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು - ಧಾ ಮಹಾನಗರ ಪಾಲಿಕೆ ಈಗ ಕಸದಲ್ಲಿಯೇ ರಸ ತೆಗೆದು ಪಾಲಿಕೆಯ ಆದಾಯ ಹೆಚ್ಚಿಸಲು ಮುಂದಾಗಿದೆ. ಮನೆ - ಮನೆಯಿಂದ ಬರುವ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಬೇರ್ಪಡಿಸಿ ಮಾರಾಟ ಮಾಡುವ ಮೂಲಕ ಪಾಲಿಕೆಗೆ ಆದಾಯ ತರುವಲ್ಲಿ ಚಿಂತನೆ ನಡೆಸಿದೆ.

ಕಸದಿಂದ ರಸ ತೆಗೆಯಲು ಮುಂದಾದ ಹು-ಧಾ ಪಾಲಿಕೆ

ಹೌದು.. ಅವಳಿನಗರದಲ್ಲಿ ನಿತ್ಯ ಬರುವ ತ್ಯಾಜ್ಯದಲ್ಲಿ ಸುಮಾರು 10-12 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಈ ಕಸದಲ್ಲಿರುವ ಪ್ಲಾಸ್ಟಿಕ್ ಬಾಟಲ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳನ್ನು ಬೇರ್ಪಡಿಸಿ, ಮರುಬಳಕಗೆ ಯೋಗ್ಯವಾದ ರೂಪದಲ್ಲಿ ತೆಗೆದು ಅದನ್ನು ಖಾಸಗಿ ಕಂಪನಿಗೆ ಮಾರಾಟ ಮಾಡಲು ಪಾಲಿಕೆ ಮುಂದಾಗಿದೆ. ಇದರಿಂದ ಪಾಲಿಕೆಗೆ ವರ್ಷಕ್ಕೆ ಲಕ್ಷ - ಲಕ್ಷ ಆದಾಯ ಬರುವ ಸಾಧ್ಯತೆ ಇದೆ. ಎಲ್ಲೆಂದರಲ್ಲಿ ಎಸೆಯುವ ಕಸದಲ್ಲಿಯೇ ರಸ ತೆಗೆಯುವ ಬಗ್ಗೆ ಯೋಜನೆ ರೂಪಿಸುತ್ತಿರುವ ಪಾಲಿಕೆ, ಇಂದೋರ್ ಮಾದರಿಯಲ್ಲಿ ಯೋಜನೆ ಕೈಗೆತ್ತಿಕೊಂಡಿದೆ.

ಓದಿ: ಪ್ರೇಮಿ ಜೊತೆ ಲಿವ್​ ಇನ್​ ರಿಲೇಷನ್​.. ಮಗಳನ್ನೇ ಅಪಹರಿಸಿ ಕೊಲೆ ಮಾಡಿದ ತಂದೆ!

ಮಹಾನಗರ ಪಾಲಿಕೆ ಈ ಬಗ್ಗೆ ಐಒಸಿಎಲ್ ಸಂಸ್ಥೆ ಜೊತೆ ಮಾತುಕತೆ ನಡೆಸಲು ಮುಂದಾಗಿದೆ. ಅಲ್ಲದೇ, ಬೆಂಗೇರಿಯಲ್ಲಿ ಈಗಾಗಲೇ 25 ಲಕ್ಷ ವೆಚ್ಚದಲ್ಲಿ ಪ್ಲಾಸ್ಟಿಕ್ ಕರಗಿಸುವ ಯಂತ್ರವನ್ನು ನಿರ್ಮಾಣ ಮಾಡಲಾಗುತ್ತಿದ್ದು, ನಿತ್ಯ ಬರುವ 10-12 ಟನ್ ಪ್ಲಾಸ್ಟಿಕ್ ತ್ಯಾಜ್ಯದಿಂದ ಆದಾಯ ಪಡೆದುಕೊಂಡು ಹಲವು ಕಾಮಗಾರಿಗಳಿಗೆ ಮರು ಬಳಕೆ ಮಾಡಲು ಪಾಲಿಕೆ ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.