ETV Bharat / city

ಬೈಕ್ ಸವಾರರ ಸಾವು ಪ್ರಕರಣಕ್ಕೆ ಟ್ವಿಸ್ಟ್... ತನಿಖೆಯಲ್ಲಿ ಗೊತ್ತಾಯ್ತು Hit and Run! - ಬೈಕ್ ಅಪಘಾತ

ಬೈಕ್ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಹಿಟ್ ಆ್ಯಂಡ್ ರನ್ ಪ್ರಕರಣಲ್ಲಿ ಸವಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Hit and Run Case
Hit and Run Case
author img

By

Published : Jul 23, 2021, 1:43 AM IST

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯಲ್ಲಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಅಸುಗಿದ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಘಟನೆಗೆ ಹಿಟ್ ಆ್ಯಂಡ್ ರನ್ ಕಾರಣ ಎಂದು ತಿಳಿದುಬಂದಿದೆ.

ಹೌದು, ಸೋಮವಾರ ಬಿಜಾಪುರ ಮೂಲದ ಸಂತೋಷ (23) ಹಾಗೂ ಭೀಮಾನಂದ ಮಾರುತಿಗಸ್ತಿ ಎಂಬುವವರು ಕುಕ್ಕೆ ಸುಬ್ರಹ್ಮಣ್ಯ ಪ್ರವಾಸ ಮುಗಿಸಿ ಮರಳಿ ಊರಿಗೆ ತೆರಳುತ್ತಿದ್ದಾಗ ಕುಸುಗಲ್ ರಸ್ತೆಯಲ್ಲಿ ಬೈಕ್ ಸ್ಕೀಡ್ ಆಗಿ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಪೂರ್ವ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಬಳಿಕ ಮೇಲಾಧಿಕಾರಿಗಳ ಆದೇಶದ ಮೇರೆಗೆ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಇನ್ಸ್​​ಪೆಕ್ಟರ್ ಎನ್.ಪಿ.ಕಾಡದೇವರ ಮಠ ನೇತೃತ್ವದಲ್ಲಿ ಹೆಚ್ಚಿನ ತನಿಖೆ ಕೈಗೊಂಡಾಗ ಇದು ಹಿಟ್ ಆ್ಯಂಡ್ ರನ್ ಪ್ರಕರಣ ಎಂದು ತಿಳಿದುಬಂದಿದೆ.

ಹುಬ್ಬಳ್ಳಿ ಮಾರ್ಗವಾಗಿ ಹೊರಟ್ಟಿದ್ದ ಬೈಕ್ ಸವಾರರಿಗೆ ಬಿಜಾಪುರದಿಂದ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಇದೀಗ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. (ಧಾರಾಕಾರ ಮಳೆ: ಭೂ ಕುಸಿತ... ಅವಶೇಷಗಳಡಿ 400-500 ಜನ!)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.