ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡಿದ್ದಕ್ಕೆ ವಾಣಿಜ್ಯ ನಗರಿ ಜನರು ಅಸಮಾಧಾನ ವ್ಯಕ್ತಪಡಿಸಿದರೆ, ಕೋರ್ಟ್ ಮೊರೆ ಹೋಗಿದ್ದ ಮಹಾನಗರ ಪಾಲಿಕೆ ಮಾಜಿ ಸದಸ್ಯರು ಸ್ವಾಗತಿಸಿದ್ದಾರೆ.
ಕಳೆದ 18 ತಿಂಗಳಿಂದ ಜನಪ್ರತಿನಿಧಿಗಳಿಲ್ಲದೆ, ಅಧಿಕಾರಿಗಳ ಕೈಯಲ್ಲಿರುವ ಮಹಾನಗರ ಪಾಲಿಕೆಯ ಚುನಾವಣೆಯನ್ನು ಮತ್ತೆ 7 ತಿಂಗಳ ಕಾಲ ಹೈಕೋರ್ಟ್ ಮುಂದೂಡಿದೆ. ಇದರಿಂದ ನಗರದ ಅಭಿವೃದ್ದಿ ಕಾಮಗಾರಿಗಳು ಕುಂಠಿತವಾಗುತ್ತಿವೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓದಿ: ಬಹುಮತ ಇರುವ ಕಾರಣ ಸಭಾಪತಿ ಸ್ಥಾನ ಬಿಜೆಪಿಗೆ ಸಿಗಬೇಕು: ಡಿಸಿಎಂ ಅಶ್ವತ್ಥ ನಾರಾಯಣ
ಆದರೆ ಮೀಸಲಾತಿ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ಪಾಲಿಕೆ ಮಾಜಿ ಸದಸ್ಯರು, ಮೀಸಲಾತಿ ಹಾಗೂ ವಾರ್ಡ್ ವಿಂಗಡಣೆ ಮಾಡಲು ಆದೇಶ ನೀಡಿರುವುದನ್ನು ಸ್ವಾಗತಿಸಿದ್ದಾರೆ.