ETV Bharat / city

ಆಜಾನ್ ವಿರುದ್ಧ ಅಭಿಯಾನ: ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಮೊಳಗಿದ ಸುಪ್ರಭಾತ

ಆಜಾನ್ V/S ಸುಪ್ರಭಾತ : ಮಸೀದಿ ಮೇಲಿನ ಧ್ವನಿ ವರ್ಧಕ ತೆರುವುಗೊಳಿಸಲು ಶ್ರೀರಾಮ ಸೇನೆ ನೀಡಿದ ಗಡುವು ಮುಕ್ತಾಯವಾದ ಹಿನ್ನೆಲೆ ಶ್ರೀರಾಮ ಸೇನೆ ಕಾರ್ಯಕರ್ತರು ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಸುಪ್ರಭಾತ ಮೊಳಗಿಸಿದ್ದಾರೆ..

hanuman chalisa suprabhata played in temples
ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಮೊಳಗಿದ ಸುಪ್ರಭಾತ
author img

By

Published : May 9, 2022, 11:50 AM IST

Updated : May 9, 2022, 12:23 PM IST

ವಿಜಯನಗರ/ಹುಬ್ಬಳ್ಳಿ : ಮಸೀದಿಗಳಲ್ಲಿ ಆಜಾನ್‌ಗೆ ವಿರುದ್ಧವಾಗಿ ಈ ಹಿಂದೆ ಘೋಷಿಸಿದಂತೆ ರಾಜ್ಯಾದ್ಯಂತ ಹಿಂದೂ ದೇವಾಲಯಗಳಲ್ಲಿ ಸೋಮವಾರ ಹನುಮಾನ್‌ ಚಾಲೀಸಾ, ಸುಪ್ರಭಾತ, ಭಕ್ತಿಗೀತೆ, ಭಜನೆ ಸದ್ದು ಮೊಳಗಲಾರಂಭಿಸಿದೆ. ಮುಸಲ್ಮಾನರು ನಮಾಜ್ ಮಾಡುವ ಸಮಯಕ್ಕೆ ಸರಿಯಾಗಿ ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳಲ್ಲಿ ಸುಪ್ರಭಾತ ಮೊಳಗಿದೆ.

ಆಜಾನ್ ವಿರುದ್ಧ ಅಭಿಯಾನ: ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಮೊಳಗಿದ ಸುಪ್ರಭಾತ

ವಿಜಯನಗರದಲ್ಲಿ ಆಜಾನ್ VS ಸುಪ್ರಭಾತ : ಜಿಲ್ಲೆಯಲ್ಲಿ ಆಜಾನ್ V/S ಸುಪ್ರಭಾತ ವಿಚಾರ ಮುನ್ನೆಲೆಗೆ ಬಂದಿದೆ. ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಅವರ ಕರೆಯ ಮೇರೆಗೆ ಹೊಸಪೇಟೆ ನಗರದ ಶ್ರೀಪಾದಗಟ್ಟೆ ಆಂಜನೇಯ ದೇವಾಲಯದ ಬಳಿ ಇಂದು ಮುಂಜಾನೆ ಸುಪ್ರಭಾತ ಹಾಗೂ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಹೊಸಪೇಟೆಯ ಶ್ರೀಪಾದಗಟ್ಟೆ ಆಂಜನೇಯ ದೇವಾಲಯ ಹಾಗೂ ಅಶ್ವತ್ಥ್‌ ನಾರಾಯಣ ಕಟ್ಟೆ ಬಳಿ ಹನುಮಾನ ಚಾಲೀಸಾ ಪಠಣೆ ಮಾಡಲಾಗುತ್ತಿದ್ದು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಧಾರವಾಡದಲ್ಲಿಯೂ ಮೊಳಗಿದ ಸುಪ್ರಭಾತ : ನಗರದ ಮಸೀದಿ ಎದುರು ಇರುವ ರಾಮ ಮಂದಿರದಲ್ಲಿ ಮುಂಜಾನೆ 5-10ಕ್ಕೆ ಸುಪ್ರಭಾತ ಆರಂಭಗೊಂಡಿತು. ಕಾಕರ್ ಮಸೀದಿ ಎದುರು ಬಿಗಿ ಪೊಲೀಸ್ ಬಂದೋಬಸ್ತ್​​ ಏರ್ಪಡಿಸಲಾಗಿತ್ತು. ಉಳಿದಂತೆ ಟಿಕಾರೆ ರಸ್ತೆಯ ಆಂಜನೇಯ ದೇವಸ್ಥಾನ, ಲಕ್ಷ್ಮೀ ನಾರಾಯಣ ದೇವಸ್ಥಾನ ಸೇರಿದಂತೆ ಹಲವೆಡೆ ಧ್ವನಿವರ್ಧಕದಲ್ಲಿ ಸುಪ್ರಭಾತ, ಭಜನೆ ಹಾಕಲಾಗಿತ್ತು.

ವಿವಾದಿತ ದೇವಸ್ಥಾನದಲ್ಲಿ ಮೊದಲು ಮೊಳಗಿದ ಸುಪ್ರಭಾತ : ಹುಬ್ಬಳ್ಳಿಯ ವಿವಾದಿತ ದೇವಸ್ಥಾನದಲ್ಲಿಯೇ ಮೊದಲು ಸುಪ್ರಭಾತ ಮೊಳಗಿದೆ. ಶ್ರೀರಾಮ ಸೇನೆ ಕಾರ್ಯಕರ್ತರು ಬೆಳಗ್ಗೆ 5 ಗಂಟೆಗೆ ಹಳೆ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನದಲ್ಲಿ ಸುಪ್ರಭಾತ ಅಭಿಯಾನಕ್ಕೆ ಚಾಲನೆ ನೀಡಿದರು. ಕಳೆದ ತಿಂಗಳು ಹುಬ್ಬಳ್ಳಿ ಗಲಭೆಯ ವೇಳೆ ಈ ದೇವಸ್ಥಾನದ ಮೇಲೆ ದಾಳಿಯಾಗಿತ್ತು.

ಕಲಬುರಗಿಯ ಹಲವೆಡೆ ರಾಮ ನಾಮ‌ ಜಪ : ನಗರದ ಹಲವು ದೇವಸ್ಥಾನದ ಮೇಲೆ ಮೈಕ್ ಅಳವಡಿಸಿ ನಸುಕಿನ ಜಾವವೇ ಸುಪ್ರಭಾತ ಮೊಳಗಿಸಲಾಗಿದೆ. ಕಲಬುರಗಿಯ ಸಂತೋಷ್ ಕಾಲೋನಿಯ ದಕ್ಷಿಣಮುಖಿ ಹನುಮಾನ್ ದೇವಸ್ಥಾನದಲ್ಲಿ ಸುಪ್ರಭಾತ ಮೊಳಗಿಸಲಾಗಿತ್ತು.

ಸಿದ್ದಲಿಂಗ ಸ್ವಾಮೀಜಿ ಆಕ್ರೋಶ : ಇಂದು ಬೆಳಗ್ಗೆ 4.50ಕ್ಕೆ ರಾಜ್ಯಾದ್ಯಂತ ಆಜಾನ್ ವಿರೋಧಿಸಿ ರಾಮ ಜಪ, ಹನುಮಾನ್ ಚಾಲೀಸಾ ಮೊಳಗಿಸಿದ್ದೇವೆ. ಇನ್ನು ಮುಂದಾದರೂ, ಸರ್ಕಾರ ಎಚ್ಚೆತ್ತುಕೊಂಡು ಮಸೀದಿಗಳ ಮೈಕ್‌ಗಳಿಂದ ಉಂಟಾಗುತ್ತಿರುವ ಕಿರಿಕಿರಿ ತಡೆಯಬೇಕು ಎಂದು ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ. ಆಂದೋಲ ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯದ 1000 ದೇಗುಲಗಳಲ್ಲಿ ಸುಪ್ರಭಾತ, ಭಜನೆ ಮೊಳಗಿಸಲಾಗಿದೆ.

ಹುನುಮಾನ್ ಚಾಲೀಸಾ, ಭಜನೆ, ಮಂತ್ರ ಪಠಣ ಅತ್ಯಂತ ಯಶಸ್ವಿಯಾಗಿದೆ. ಬೆಂಗಳೂರಿನ ಆಂಜನೇೆಯ ದೇವಸ್ಥಾನದಲ್ಲಿ ಮಂತ್ರ ಪಠಣ ಹಾಗೂ ಹನುಮಾನ್ ಚಾಲೀಸಾಗೆ ಪೊಲೀಸರು ಅವಕಾಶ ನೀಡಲಿಲ್ಲ. ಆಂಜನೇಯ ದೇವಸ್ಥಾನ ಪಾಕಿಸ್ತಾನದಲ್ಲಿಲ್ಲ. ಕರ್ನಾಟದಲ್ಲಿಯೆ ಇದೇ. ಮಂತ್ರ ಪಠಣ, ವೇದ ಘೋಷಕ್ಕೆ ಅಡ್ಡಿಪಡಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಸುಪ್ರಭಾತ ಹಾಡಲು ಹೋದವರನ್ನು ಬಂಧಿಸಿದ್ದೀರಿ, ಇದು ನ್ಯಾಯವೇ?': ಮುತಾಲಿಕ್

Last Updated : May 9, 2022, 12:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.