ಹುಬ್ಬಳ್ಳಿ: ಭಾನುವಾರ ಸಂಜೆ ವಾಣಿಜ್ಯ ನಗರಿಯಲ್ಲಿ ಭಾರಿ ಮಳೆಯಾಗಿದೆ. ಮಳೆ ಹಾನಿ ವೀಕ್ಷಣೆಗೆಂದು ಹೋದ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ದರ್ಪ ತೋರಿದ್ದಾರೆ ಎನ್ನಲಾಗ್ತಿದೆ.
ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರು ನಿನ್ನೆ ಸಂಜೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಲು ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ರಸ್ತೆಯ ಮೇಲಿದ್ದ ಶೂ ಅನ್ನು ಗನ್‌ಮ್ಯಾನ್ ಕಾರಿನಲ್ಲಿಟ್ಟಿದ್ದಾನೆ. ತಮ್ಮ ಗನ್‌ಮ್ಯಾನ್ ಕೈಯಲ್ಲಿ ಶೂ ಅನ್ನು ಶಾಸಕರು ಎತ್ತಿಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರಿ ಸಿಬ್ಬಂದಿಯಿಂದ ಇಂತಹ ಕೆಲಸ ಮಾಡಿಸಿಕೊಂಡಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.