ಹುಬ್ಬಳ್ಳಿ: 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಊರಿಗೆ ಮರಳಿದ ನಿವೃತ್ತ ತವರಿನ ಜನರು ಆಧರದಿಂದ ಸ್ವಾಗತಿಸಿದ್ದಾರೆ. ಕಲಘಟಗಿ ತಾಲೂಕು ಬಮ್ಮಿಗಟ್ಟಿಯ ವೀರ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿ, ದೇಶ ಪ್ರೇಮ ಮೆರೆದಿದ್ದಾರೆ.
ಯೋಧ ಮೆಹಬೂಬಸಾಬ್ ಬೆಲವಂತ 18 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ, ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮಕ್ಕೆ ವಾಪಸಾದರು. ಯೋಧ ಗ್ರಾಮಕ್ಕೆ ಆಗಮಿಸುತ್ತಿರುವ ಮಾಹಿತಿ ತಿಳಿದ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿತ್ತು. ಗ್ರಾಮದ ಮಾಜಿ ಸೈನಿಕರು ಮೆಹಬೂಬಸಾಬ್ ಅವರಿಗೆ ಸೆಲ್ಯೂಟ್ ಹೊಡೆದು ಗೌರವ ಸೂಚಿಸಿದರು. ನಂತರ ಗ್ರಾಮಸ್ಥರು ಡೊಳ್ಳು ಬಾರಿಸುವ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಯೋಧ ಮೆಹಬೂಬಸಾಬ್ 2004ರಿಂದ ರಾಂಚಿ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ತಬಾಂಗ್ ಸೇರಿದಂತೆ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಹುಲಿಯಾಗ್ತಾರೆ ಅಂದ್ಕೊಂಡಿದ್ವಿ, ಆದ್ರೆ ಹಸಿವಿಂದ ಒದ್ದಾಡುವ ಇಲಿಯಾಗಿದ್ದಾರೆ: ಈಶ್ವರಪ್ಪ