ಹುಬ್ಬಳ್ಳಿ: ಕೊರೊನಾ ಎಂಬ ಮಾರಿ ಮನುಕುಲದ ಮನೋ ಬಲವನ್ನೇ ಉಡುಗಿಸಿದೆ. ಸಾಂಕ್ರಾಮಿಕ ವೈರಸ್ನಿಂದಾಗಿ ದೇಶವೇ ಲಾಕ್ ಡೌನ್ ಆಗಿದೆ. ಮನುಷ್ಯರಷ್ಟೇ ಪ್ರಾಣಿಗಳೂ ಸಹ ಇದರಿಂದ ಸಂಕಷ್ಟಕ್ಕೀಡಾಗಿವೆ.
ಮನುಷ್ಯನೇ ಆಹಾರಕ್ಕಾಗಿ ಪರದಾಡುತ್ತಿದ್ದಾನೆ. ಪ್ರಾಣಿಗಳ ಸ್ಥಿತಿಯನ್ನಂತೂ ಕೇಳ್ಬೇಕಾಗಿಲ್ಲ.
ಹೀಗಾಗಿ ನಗರದ ಯುವಕರ ತಂಡವೊಂದು ಹಸುಗಳಿಗೆ ಮೇವು ಹಾಕುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಚೆನ್ನಮ್ಮ ವೃತ್ತ, ಹಳೇ ಹುಬ್ಬಳ್ಳಿ, ಸಿದ್ಧಾರೂಢಮಠ, ದುರ್ಗದಬೈಲ್, ಮ್ಯಾದರ ಓಣಿ ಹಾಗೂ ಮುಂತಾದ ಪ್ರದೇಶದಗಳಲ್ಲಿ ಬಿಡಾಡಿ ದನಗಳಿಗೆ ಮೇವು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ