ETV Bharat / city

ಚನ್ನಮ್ಮ ವೃತ್ತದ ಫ್ಲೈಓವರ್ ನಿರ್ಮಾಣ ಕಾಮಗಾರಿ.. ಸಾರ್ವಜನಿಕರ ಸಲಹೆ ಆಧರಿಸಿ ವರದಿ ಸಿದ್ಧಪಡಿಸಿದ ಸಮಿತಿ

author img

By

Published : Nov 3, 2021, 7:17 AM IST

ತೀವ್ರ ಸಂಚಾರ ದಟ್ಟಣೆ ಇರುವ ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣ ಕುರಿತು ಸಾರ್ವಜನಿಕರು ಹಾಗೂ ವರ್ತಕರ ಸಲಹೆಗಳನ್ನು ಪಡೆಯಲು ರಚಿಸಿದ್ದ ಜಿಲ್ಲಾಧಿಕಾರಿಗಳು ಸೇರಿದಂತೆ ಶಾಸಕರು, ಹಿರಿಯ ಅಧಿಕಾರಿಗಳು ಹಾಗೂ ತಜ್ಞರನ್ನೊಳಗೊಂಡ 13 ಸದಸ್ಯರ ಸಮಿತಿಯು ಈ ವರದಿಯನ್ನು ಶೀಘ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಸಲ್ಲಿಸಲಿದೆ..

Flyover construction work of Channamma Circle in Hubli
ಚನ್ನಮ್ಮ ವೃತ್ತದ ಫ್ಲೈಓವರ್ ನಿರ್ಮಾಣ ಕಾಮಗಾರಿ

ಹುಬ್ಬಳ್ಳಿ: ತೀವ್ರ ಸಂಚಾರ ದಟ್ಟಣೆ ಇರುವ ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣ ಕುರಿತು ಸಾರ್ವಜನಿಕರು ಹಾಗೂ ವರ್ತಕರ ಸಲಹೆಗಳನ್ನು ಪಡೆಯಲು ರಚಿಸಿದ್ದ ಸಮಿತಿಯು ಸಾರ್ವಜನಿಕರ ಸಲಹೆಗಳನ್ನಾಧರಿಸಿ ಸಮಿತಿ ಸದಸ್ಯರ ಅಭಿಪ್ರಾಯಗಳೊಂದಿಗೆ ವರದಿ ಸಿದ್ಧಪಡಿಸಿದೆ.

Flyover construction work of Channamma Circle in Hubli
ಸಾರ್ವಜನಿಕರ ಸಲಹೆ ಆಧರಿಸಿ ವರದಿ ಸಿದ್ಧಪಡಿಸಿದ ಸಮಿತಿ

ಜಿಲ್ಲಾಧಿಕಾರಿಗಳು ಸೇರಿದಂತೆ ಶಾಸಕರು, ಹಿರಿಯ ಅಧಿಕಾರಿಗಳು ಹಾಗೂ ತಜ್ಞರನ್ನೊಳಗೊಂಡ 13 ಸದಸ್ಯರ ಸಮಿತಿಯು ಈ ವರದಿಯನ್ನು ಶೀಘ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಸಲ್ಲಿಸಲಿದೆ. ಸಾರ್ವಜನಿಕರಿಗೂ ವರದಿಯ ವಿವರಗಳನ್ನು ಒದಗಿಸಲಿದೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸೆ.25 ರಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಯ ನಿರ್ದೇಶನದಂತೆ ಶಾಸಕರಾದ ಅರವಿಂದ ಬೆಲ್ಲದ್, ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು, ಹೆಚ್‌ಡಿಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕರು, ಐಐಟಿ, ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು, ಹೆಸರಾಂತ ನಿರ್ಮಾಣ ಸಂಸ್ಥೆಗಳ ತಜ್ಞರು, ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಪ್ರಾದೇಶಿಕ ಮುಖ್ಯ ಅಭಿಯಂತರರು ಸೇರಿದಂತೆ 13 ಜನರ ಸಮಿತಿಯನ್ನು ಅಕ್ಟೋಬರ್ 4ರಂದು ರಚಿಸಲಾಗಿತ್ತು.

ಚನ್ನಮ್ಮ ವೃತ್ತದ ಫ್ಲೈಓವರ್ ನೀಲನಕ್ಷೆ
ಚನ್ನಮ್ಮ ವೃತ್ತದ ಫ್ಲೈಓವರ್ ನೀಲನಕ್ಷೆ

ಈ ಸಮಿತಿಯು ಎರಡು ಬಾರಿ ಸಾರ್ವಜನಿಕ ಭಾಗಿದಾರರ ಸಭೆಗಳು ಮತ್ತು ಮೂರು ಬಾರಿ ಸಮಿತಿ ಸದಸ್ಯರ ಸಭೆಗಳು ಸೇರಿ ಒಟ್ಟು ಐದು ಸಭೆಗಳನ್ನು ನಡೆಸಿ ವಿಸ್ತೃತವಾಗಿ ಚರ್ಚಿಸಿದೆ. ಸಾರ್ವಜನಿಕರು, ವರ್ತಕರು ನೀಡಿದ ಸಲಹೆಗಳನ್ನು ಪಡೆದಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರಗಳನ್ನು ಸಮಿತಿಯು ಸೂಚಿಸಿ ವರದಿ ಸಿದ್ಧಪಡಿಸಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ವಿನ್ಯಾಸ ಮತ್ತು ತಾಂತ್ರಿಕ ಫಿಸಿಬಿಲಿಟಿ ಪರಿಶೀಲಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.