ETV Bharat / city

ಹುಬ್ಬಳ್ಳಿ ವಿಭಾಗದ ಮೊದಲ ದಿನದ ಸಾರಿಗೆ ಆದಾಯ ಎಷ್ಟು ಗೊತ್ತಾ? - ಸಾರ್ವಜನಿಕ ಸಾರಿಗೆ ಸಂಚಾರ ಪುನಾರಂಭ

ಲಾಕ್​ಡೌನ್ ಹಿನ್ನೆಲೆ ಕಳೆದ 58 ದಿನಗಳಿಂದ ಸ್ಥಗಿತಗೊಂಡಿದ್ದ ಸಾರ್ವಜನಿಕ ಸಾರಿಗೆ ಬಸ್ ಸಂಚಾರ ಪುನಾರಂಭವಾಗಿದ್ದು, ಹುಬ್ಬಳ್ಳಿ ವಿಭಾಗದ ನಾಲ್ಕು ಘಟಕಗಳಿಂದ ನಿನ್ನೆ 46,000 ರೂ. ಆದಾಯ ಸಂಗ್ರಹವಾಗಿದೆ.

first day transportation collection of Hubli Division?
ಹುಬ್ಬಳ್ಳಿ ವಿಭಾಗದ ಮೊದಲ ದಿನದ ಸಾರಿಗೆ ಆದಾಯ ಎಷ್ಟು ಗೊತ್ತಾ?
author img

By

Published : May 20, 2020, 9:03 AM IST

ಹುಬ್ಬಳ್ಳಿ: ಲಾಕ್​ಡೌನ್ ಹಿನ್ನೆಲೆ ಕಳೆದ 58 ದಿನಗಳಿಂದ ಸ್ಥಗಿತಗೊಂಡಿದ್ದ ಸಾರ್ವಜನಿಕ ಸಾರಿಗೆ ಸಂಚಾರ ಸರ್ಕಾರದ ಅನುಮತಿ ಮೇರೆಗೆ ಪುನಾರಂಭವಾಗಿದೆ.

ಸರ್ಕಾರದ ನಿರ್ದೇಶನಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳ ಜೊತೆಗೆ ಬಸ್​ಗಳನ್ನ ರಸ್ತೆಗಿಳಿಸಲಾಗಿದ್ದು, ನಿನ್ನೆ 46,000 ರೂ. ಆದಾಯ ಸಂಗ್ರಹವಾಗಿದೆ. ಹುಬ್ಬಳ್ಳಿ ವಿಭಾಗದ ನಾಲ್ಕು ಘಟಕಗಳಿಂದ 110 ಬಸ್​​ಗಳನ್ನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ನಿಲ್ಲಿಸಲಾಗಿತ್ತು. ಆದರೆ ಪ್ರಾರಂಭಿಕ ದಿನ ಮತ್ತು ಕೊರೊನಾ ಭೀತಿಯ ಹಿನ್ನೆಲೆ ಪ್ರಯಾಣಿಕರಿಲ್ಲದೆ 63 ಬಸ್​ಗಳು ಮಾತ್ರ ಕಾರ್ಯಾಚರಣೆ ನಡೆಸಿವೆ. ಜಿಲ್ಲೆಯೊಳಗಿನ ಪ್ರಮುಖ ಸ್ಥಳಗಳು ಸೇರಿದಂತೆ ಹೊರ ಜಿಲ್ಲೆಗಳಾದ ಬೆಂಗಳೂರು, ಗದಗ, ಹಾವೇರಿ, ಇಳಕಲ್, ಬೆಳಗಾವಿ, ವಿಜಯಪುರ, ಹಾನಗಲ್, ಶಿವಮೊಗ್ಗ ಮುಂತಾದ ಊರುಗಳಿಗೆ ಸಾರಿಗೆ ಬಸ್​ಗಳು ಸಂಚರಿಸಿವೆ.

ಕಾರ್ಯಾಚರಣೆ ಮುಗಿಸಿ ಘಟಕಕ್ಕೆ ಹಿಂದಿರುಗಿದ ಎಲ್ಲಾ ಬಸ್​​ಗಳ ಒಳ ಭಾಗ ಮತ್ತು ಹೊರ ಭಾಗವನ್ನ ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಸೋಡಿಯಂ ಹೈಪೋಕ್ಲೋರೈಡ್ ರಾಸಾಯನಿಕದಿಂದ ಸ್ಯಾನಿಟೈಜೇಷನ್ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.