ETV Bharat / city

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಅಪಾರ ಪ್ರಮಾಣದ ಫಿನಾಯಿಲ್ ಸುಟ್ಟು ಕರಕಲು - ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಹೊತ್ತಿ ಉರಿದ ಫ್ಯಾಕ್ಟರಿ

ವಿದ್ಯುತ್​ನಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿ ಫಿನಾಯಿಲ್ ಹಾಗೂ ಪೊರಕೆ ತಯಾರಿಕೆ ಫ್ಯಾಕ್ಟರಿ ಹೊತ್ತಿ ಉರಿದಿರುವ ಘಟನೆ ವಿಭವ್ ಇಂಡಸ್ಟ್ರೀಯಲ್​ನಲ್ಲಿ ನಡೆದಿದೆ.

Fire attack
ಫ್ಯಾಕ್ಟರಿ
author img

By

Published : Oct 26, 2020, 8:39 PM IST

ಹುಬ್ಬಳ್ಳಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ‌ ಫಿನಾಯಿಲ್ ಹಾಗೂ ಪೊರಕೆ ತಯಾರಿಕೆ ಫ್ಯಾಕ್ಟರಿಗೆ ಬೆಂಕಿ ಬಿದ್ದು, ಅಪಾರ ಪ್ರಮಾಣ ಫಿನಾಯಿಲ್ ಸುಟ್ಟು ‌ಕರಕಲಾದ ಘಟನೆ ಶೇರವಾಡ ಗ್ರಾಮದ ಕ್ರಾಸ್ ಬಳಿಯಿರುವ ವಿಭವ್ ಇಂಡಸ್ಟ್ರೀಯಲ್​ನಲ್ಲಿ ನಡೆದಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಹೊತ್ತಿ ಉರಿದ ಫ್ಯಾಕ್ಟರಿ

ಸಂಜೆ ವಿದ್ಯುತ್​ನಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿ ಫ್ಯಾಕ್ಟರಿ ಹೊತ್ತಿ ಉರಿದಿದೆ. ಸ್ಥಳಕ್ಕೆ ಕುಂದಗೋಳ ಹಾಗೂ ಹುಬ್ಬಳ್ಳಿಯ ನಾಲ್ಕು ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ‌ ನಂದಿಸುವ ಕಾರ್ಯ ನಡೆಸಿವೆ. ಬೆಂಕಿ ಅವಘಡದಿಂದ ಲಕ್ಷಾಂತರ ಮೌಲ್ಯದ ಫಿನಾಯಿಲ್ ಹಾಗೂ ಪೊರಕೆ ಸುಟ್ಟು ಕರಕಲಾಗಿವೆ.

ವಿಜಯ ದಶಮಿ ಹಬ್ಬದ ಕಾರಣ ಫ್ಯಾಕ್ಟರಿ‌ಗೆ ರಜೆ ನೀಡಲಾಗಿತ್ತು. ಫ್ಯಾಕ್ಟರಿ ಒಳಗಡೆ ಯಾರೂ ಕಾರ್ಮಿಕರು ಇರದ ಕಾರಣ ಭಾರೀ‌ ಅನಾಹುತ ತಪ್ಪಿದಂತಾಗಿದೆ. ಗ್ರಾಮೀಣ ಪೊಲೀಸ್​​​​​ ಠಾಣಾ ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಫ್ಯಾಕ್ಟರಿ ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ಅವರಿಗೆ ಸೇರಿದ್ದು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.