ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪೋಸ್ಟ್ ಆಫೀಸ್ ಹಿಂದಿರುವ ರೇಣುಕಾದೇವಿ ಫೈನಾನ್ಸ್ ಕಚೇರಿಯಲ್ಲಿ ಖದೀಮರು ದರೋಡೆ ಮಾಡಿದ್ದಾರೆ. ಮಂಜುನಾಥ ಸೊನ್ನದ ಎಂಬುವವರಿಗೆ ಸೇರಿದ ಫೈನಾನ್ಸ್ಗೆ ನುಗ್ಗಿದ ದುಷ್ಕರ್ಮಿಗಳು ಬಾಗಿಲು ಗಾಜು ಒಡೆದು 4 ಲಕ್ಷ ರೂ. ದೋಚಿದ್ದಾರೆ ಎಂದು ತಿಳಿದು ಬಂದಿದೆ.
ಫೈನಾನ್ಸ್ನಲ್ಲಿ ಕೆಲಸ ಮಾಡುವ ಯುವಕರು ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಪ್ರಕರಣದ ಆರೋಪಿಗಳು ಫೋನ್ ಮಾಡಿ ಮಾಲೀಕನಿಗೆ ಅವಾಜ್ ಕೂಡ ಹಾಕಿದ್ದಾರಂತೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಫೋನ್ ಸಂಭಾಷಣೆ ಆಧಾರವಾಗಿಟ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ವಿವಾಹೇತರ ಸಂಬಂಧ: ಸ್ನೇಹಿತ, ಪತ್ನಿ ಜೊತೆಗೂಡಿ ಗಂಡನ ಮೇಲೆ ದಾಳಿ