ETV Bharat / city

ಯುವರತ್ನ ಸಿನಿಮಾ ಚಿತ್ರೀಕರಣವಾದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ನಟನಿಗೆ ನಮನ - ಪುನೀತ್ ರಾಜ್​ಕುಮಾರ್​ಗೆ ನಮನ

ಪುನೀತ್ ರಾಜ್​ಕುಮಾರ್​ ಅವರ ಯುವರತ್ನ ಚಿತ್ರದ ಚಿತ್ರೀಕರಣ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ನಡೆದಿತ್ತು. ಇಂದು ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ತಯಾರಿಸಿದ ಪುನೀತ್ ಪ್ರತಿಮೆ ಕೂರಿಸಿ ಅಂತಿಮ ನಮನ ಸಲ್ಲಿಸಿದರು.

fans pay tribute to puneeth rajkumar by placing his statue in darawada
ಯುವರತ್ನ ಚಿತ್ರದ ಚಿತ್ರೀಕರಣವಾದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ನಟನಿಗೆ ನಮನ
author img

By

Published : Oct 30, 2021, 12:27 PM IST

ಧಾರವಾಡ: ಕನ್ನಡ ಚಿತ್ರರಂಗದ ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್​ ಹೃದಯಾಘಾತದಿಂದ ನಿನ್ನೆ ವಿಧಿವಶವಾಗಿದ್ದಾರೆ. ಈ ಹಿನ್ನೆಲೆ, ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹಲವರು ದಿ. ಪುನೀತ್​ ರಾಜ್​ಕುಮಾರ್​ರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಧಾರವಾಡದೊಂದಿಗೆ ನಂಟು ಹೊಂದಿದ್ದ ಪುನೀತ್ ರಾಜ್​ಕುಮಾರ್​ ಅವರ ಯುವರತ್ನ ಚಿತ್ರದ ಚಿತ್ರೀಕರಣ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ನಡೆದಿತ್ತು. ಇಂದು ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ತಯಾರಿಸಿದ ಪುನೀತ್ ಪ್ರತಿಮೆ ಕೂರಿಸಿ ಅಂತಿಮ ನಮನ ಸಲ್ಲಿಸಿದರು.

ಯುವರತ್ನ ಚಿತ್ರದ ಚಿತ್ರೀಕರಣವಾದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ನಟನಿಗೆ ನಮನ

ಕೆಲಗೇರಿ ಗಾಯತ್ರಿಪುರ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಪುನೀತ್ ನಿಧನದ ಬಳಿಕ ಐದು ಗಂಟೆಗಳ ಕಲಾಸೇವೆ ಮಾಡಿ ಅಪ್ಪುವಿನ ಮೂರ್ತಿ ತಯಾರಿಸಿದ್ದರು. ಅದನ್ನು ಇಂದು ಕೆಸಿಡಿ ಕಾಲೇಜಿನ ಆವರಣದಲ್ಲಿ ಕೂರಿಸಿ ಪೂಜಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪುನೀತ್ ಅವರ ಯುವರತ್ನ ಚಿತ್ರ ಧಾರವಾಡದ ಕೆಸಿಡಿ ಹಾಗೂ ಕೆಯುಡಿ ಸೇರಿದಂತೆ, ಚಿತ್ರದ ಬಹುತೇಕ ಭಾಗ ಧಾರವಾಡದಲ್ಲಿ ಚಿತ್ರೀಕರಣಗೊಂಡಿರುವುದು ವಿಶೇಷವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.