ಧಾರವಾಡ: ಇಲ್ಲೊಬ್ಬ ವಿಚಿತ್ರ ಸ್ವಾಮಿ ಪ್ರತ್ಯಕ್ಷನಾಗಿದ್ದಾನೆ. ಈತನಿಗೆ ನಮಸ್ಕಾರ ಮಾಡಿದ್ರೆ ದುಡ್ಡು ಕೊಡಲೇಬೇಕು. ದುಡ್ಡು ಕೊಡಲಿಲ್ಲ ಅಂದ್ರೆ ಜಗಳ ಮಾಡುತ್ತಾನಂತೆ.
ಇಂದು ಮುರುಘಾ ಮಠ ಜಾತ್ರಾ ಮಹೋತ್ಸವ ಇರುವ ಕಾರಣ ಮುರುಘಾ ಮಠಕ್ಕೆ ನಿನ್ನೆ ರಾತ್ರಿ ಸ್ವಾಮಿಯೊಬ್ಬ ಆಗಮಿಸಿದ್ದ. ಸುಮ್ಮನೆ ನನಗೆ ಯಾಕೆ ನಮಸ್ಕಾರ ಮಾಡುತ್ತೀರಿ? ನಾನು ಏಕೆ ಆಶೀರ್ವಾದ ಮಾಡಬೇಕು? ಊದುಬತ್ತಿಗೆ ದುಡ್ಡು ಕೊಡುತ್ತೀರಿ, ನನಗೆ ಯಾಕೆ ಕೊಡುತ್ತಿಲ್ಲ ಎಂದು ಸಾರ್ವಜನಿಕರೊಂದಿಗೆ ಜಗಳವಾಡಿದ್ದಾನೆ.
ಭಕ್ತರು ದುಡ್ಡು ಕೇಳುವೆಯಾ ಎಂದು ಚಳಿ ಬಿಡಿಸಲು ಮುಂದಾಗುತ್ತಿದ್ದಂತೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಮುರುಘಾ ಮಠದ ಆವರಣದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಇನ್ನು ಸ್ಥಳೀಯರು ಈ ಘಟನೆಯನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.