ETV Bharat / city

ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆಯಿಂದ ಜನ ಹೈರಾಣ

ಹುಬ್ಬಳ್ಳಿಯಲ್ಲಿ ಉಂಟಾಗುವ ಸಂಚಾರ ದಟ್ಟಣೆಯಿಂದ ಸವಾರರು ಹೈರಾಣಾಗಿದ್ದು, ಟ್ರಾಫಿಕ್​​ ನಿಯಂತ್ರಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

everyday-heavy-traffic-jam-in-hubballi
author img

By

Published : Oct 7, 2019, 5:31 PM IST

ಹುಬ್ಬಳ್ಳಿ: ಟ್ರಾಫಿಕ್​..ಟ್ರಾಫಿಕ್​..ಟ್ರಾಫಿಕ್​... ಇದು ಅವಳಿನಗರ ಹುಬ್ಬಳ್ಳಿ ಜನರ ಗೋಳು. ಹೌದು, ಇಲ್ಲಿ ನಿತ್ಯ ಉಂಟಾಗುವ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಅದರಲ್ಲೂ ಹಬ್ಬದ ದಿನಗಳಲ್ಲಿ ಹೇಳುವುದೇ ಬೇಡ. ಇದರಿಂದಾಗಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಸಾರ್ವಜನಿಕರೊಂದಿಗೆ ಸಹಕರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಯುಧ ಪೂಜೆ ಹಾಗೂ ವಿಜಯ ದಶಮಿ ಪ್ರಯುಕ್ತ ಪೂಜಾ ಸಾಮಗ್ರಿ ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ನಗರಕ್ಕೆ ಸುತ್ತಮುತ್ತಲ ಪ್ರದೇಶಗಳ ಜನರು ಆಗಮಿಸುತ್ತಾರೆ. ಈ ಹಿನ್ನೆಲೆ ಮಾರುಕಟ್ಟೆ ಸುತ್ತಮುತ್ತ ವಾಹನ ನಿಲುಗಡೆಗೆ ಜಾಗವೇ ಇಲ್ಲದಂತಾಗಿದೆ. ಹೀಗಿದ್ದರೂ ಸಂಚಾರಿ ಪೊಲೀಸರು ತೆರವುಗೊಳಿಸದ ಕಾರಣ ಒತ್ತೊತ್ತಾಗಿ ಜೋಡಿಸಿದ ಬೆಂಕಿ ಕಡ್ಡಿಗಳಂತೆ ದಟ್ಟಣೆ ಉಂಟಾಗುತ್ತದೆ. ಹೀಗಾದರೆ ಹೇಗೆ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.

ರಸ್ತೆ ಬದಿ ನಿಲ್ಲಿಸಿದ ವಾಹನಗಳ ಟೋಯಿಂಗ್​ಗೆ​ ಜನರ ಆಕ್ರೋಶ

ತರಕಾರಿ, ಹೂ-ಹಣ್ಣುಗಳ ಬೆಲೆ ಗಗನಕ್ಕೆ ಏರಿದೆ. ಈ ಸಂದರ್ಭದಲ್ಲಿ ಪೊಲೀಸರೂ ದಂಡ ವಿಧಿಸುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ದಟ್ಟಣೆ ಉಂಟಾದಾಗ ಮಾರುಕಟ್ಟೆ ಒಳಹೊಕ್ಕಲು ಸಾಧ್ಯವಿಲ್ಲ. ವಾಹನಗಳನ್ನು ರಸ್ತೆ ಬದಿಯೇ ನಿಲ್ಲಿಸುತ್ತೇವೆ. ಅವುಗಳನ್ನು ಪೊಲೀಸರು ಟೋಯಿಂಗ್​ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತದೆ. ಮೊದಲು ವಾಹನ ದಟ್ಟಣೆ ನಿಯಂತ್ರಣ, ಪಾರ್ಕಿಂಗ್ ಜಾಗ ಹಾಗೂ ಕಿತ್ತು ಹೋಗಿರುವ ರಸ್ತೆಗಳನ್ನು ಸರಿಪಡಿಸಲಿ. ನಂತರ ದಂಡ ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

Intro:ಹುಬ್ಬಳಿBody:ಹಬ್ಬದ ದಿನವಾದ್ರೂ ಬೈಕ್ ಪಾರ್ಕಿಂಗ್ ಮಾಡಲು ಬಿಡಿ ಪೋಲಿಸರಿಗೆ ! ಸಾರ್ವಜನಿಕರ ಒತ್ತಾಯ.......

ಹುಬ್ಬಳ್ಳಿ:- ಅವಳಿನಗರದಲ್ಲಿ ವಾಹನ ನಿಲ್ಲಿಸಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆಗಳಿಲ್ಲ. ಅದರಲ್ಲೂ ಹಬ್ಬದ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಇಂತಹ ಸಂದರ್ಭಗಳಲ್ಲಿ ಪೋಲಿಸರು ಸಾರ್ವಜನಿಕರೊಂದಿಗೆ ಸಹಕರಿಸಬೇಕೆಂದು ಆಗ್ರಹಿಸಿ ಜನತಾ ಬಜಾರ ಹತ್ತಿರ ಸಾರ್ವಜನಿಕರು ಆಗ್ರಹಿಸಿದರು.ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನಲೆಯಲ್ಲಿ ಪೂಜಾ ಸಾಮಗ್ರಿಗಳು, ವಾಹನಗಳ ಅಲಂಕಾರಿಕ ವಸ್ತುಗಳು ಸೇರಿದಂತೆ ಹಬ್ಬಕ್ಕೆ ಬೇಕಾಗುವ ವಸ್ತುಗಳನ್ನು ಕೊಳ್ಳಲು ನಗರಕ್ಕೆ ಸುತ್ತಮುತ್ತಲಿನ ಪ್ರದೇಶದ ಜನರು ಆಗಮಿಸುವರು. ಮೊದಲೇ ದೈನಂದಿನ ಸಮಯದಲ್ಲಿ ಕಿಕ್ಕಿರಿದು ತುಂಬುವ ಮಾರುಕಟ್ಟೆಗಳು ಹಬ್ಬದ ಸಮಯದಲ್ಲಿ ಇನ್ನಷ್ಟು ಹೆಚ್ಚು ಜನಸಂದಣಿಗೆ ಕಾರಣವಾಗಿವೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ನಿಲ್ಲಿಸಲು ಪಾರ್ಕಿಂಗ್ ಸ್ಥಳವಿಲ್ಲ. ಹೀಗಿದಾಗ ಸಂಚಾರಿ ಪೋಲಿಸರು ಏಕಾಏಕಿ ಬಂದು ಪಾರ್ಕಿಂಗ್ ಮಾಡಿದ ವಾಹನಗಳನ್ನು ತೆಗೆದುಕೊಂಡು ಹೋದರೆ ಹೇಗೆ. ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಇಂತಹ ಸಂದರ್ಭದಲ್ಲಿ ಪೋಲಿಸರು ದಂಡ ಹಾಕಿದರೆ ಜನರಿಗೆ ತೊಂದರೆಯಾಗುತ್ತಿದೆ. ಮೊದಲು ಅವಳಿನಗರದಲ್ಲಿ ಪಾರ್ಕಿಂಗ್ ಸ್ಥಳಾವಕಾಶ ಸೇರಿದಂತೆ ರಸ್ತೆ ಸರಿಪಡಿಸಲಿ ನಂತರ ಪೋಲಿಸರು ದಂಡ ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು....

ಬೈಟ್:- ಜಗದೀಶ್... ಸ್ಥಳಿಯರು...

ಬೈಟ್:- ಅವಿನಾಶ್ ಬೈಕ್ ಸವಾರರು...

______________________________

ಹುಬ್ಬಳ್ಳಿ: ಸ್ಟ್ರಿಂಜರ
ಯಲ್ಲಪ್ ಕುಂದಗೋಳConclusion:ಯಲ್ಲಪ್ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.