ಹುಬ್ಬಳ್ಳಿ: ಮನುಷ್ಯರು ರಕ್ತ ದಾನ ಮಾಡುವುದರಲ್ಲಿ ವಿಶೇಷ ಏನೂ ಇಲ್ಲ. ಶ್ವಾನವೊಂದು ಮತ್ತೊಂದು ಶ್ವಾನಕ್ಕೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸಿರುವ ಅಪರೂಪದ ಘಟನೆ ಅವಳಿ ನಗರದಲ್ಲಿ ನಡೆದಿದೆ.
ಇಲ್ಲಿನ ಸುಂದರ ನಗರದ ನಿವಾಸಿ ಮನೀಷ ಕುಲಕರ್ಣಿ ಎಂಬುವವರ ರೊಟ್ವೀಲರ್ ತಳಿಯ ರಾಣಾ ಹೆಸರಿನ ಶ್ವಾನ, ರೋಟಿ ಎನ್ನುವ ಮತ್ತೊಂದು ಶ್ವಾನಕ್ಕೆ ರಕ್ತದಾನ ಮಾಡಿ ಜೀವ ಉಳಿಸಿದೆ. ಧಾರವಾಡದ ಗಣೇಶ ಅವರ ರೋಟಿ ಕಾಮಾಲೆ ( ಜಾಯಿಂಡಿಸ್ ) ರೋಗಕ್ಕೆ ತುತ್ತಾಗಿ ಕರುಳಿನ ಸಮಸ್ಯೆಯಿಂದ ಬಳಲುತ್ತಿತ್ತು, ಹೀಗಾಗಿ ರಕ್ತದ ಅವಶ್ಯಕತೆಯಿತ್ತು.
ಇದನ್ನು ತಿಳಿದ ರಾಣಾ ಶ್ವಾನ ಮಾಲೀಕ ಮನೀಷ್, ರೋಟಿಗೆ ರಕ್ತದಾನ ಮಾಡಿಸಿ ಶ್ವಾನದ ಪ್ರಾಣ ಕಾಪಾಡಿ ಎಲ್ಲರ ಮೆಚ್ಚುಗೆ ಗೆ ಪಾತ್ರವಾಗಿದ್ದಾರೆ. ಬಿ.ಇ ವಿದ್ಯಾರ್ಥಿಯಾಗಿರೋ ಮನೀಷ ಕುಲಕರ್ಣಿ ಸಹ ರಕ್ತದಾನಿಯಾಗಿರುವುದು ವಿಶೇಷ. ಸದ್ಯ ಕಳೆದ 2 ವರ್ಷದಿಂದ ಸಾಕಿರುವು ಶ್ವಾನದಿಂದ ಇದೀಗ ರೋಟಿಗೆ ರಕ್ತ ಕೊಡಿಸಿ ಶ್ವಾನದ ಜೀವ ಉಳಿಸಿದ್ದಾರೆ.