ETV Bharat / city

ಡಿಕೆಶಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಎಸ್.ಆರ್​​.ಹಿರೇಮಠ ಒತ್ತಾಯ - S.R.Hiremath

ರಾಜ್ಯ ಸರ್ಕಾರ ಫೋನ್ ಕದ್ದಾಲಿಕೆ, ಐಎಂಎ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ. ಇದೇ ರೀತಿಯಾಗಿ ಡಿ.ಕೆ.ಶಿವಕುಮಾರ್​ ಪ್ರಕರಣವನ್ನೂ ಕೇಂದ್ರ ತನಿಖಾ ಸಂಸ್ಥೆಗೆ ನೀಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್​​.ಹಿರೇಮಠ ಒತ್ತಾಯಿಸಿದರು.

ಡಿಕೆಶಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ತನಿಖೆ ನಡೆಸಬೇಕು:ಎಸ್.ಆರ್​​.ಹಿರೇಮಠ ಒತ್ತಾಯ
author img

By

Published : Sep 21, 2019, 6:21 PM IST

ಹುಬ್ಬಳ್ಳಿ: ರಾಜ್ಯ ಸರ್ಕಾರ ಯಾವ ರೀತಿಯಾಗಿ ಫೋನ್ ಕದ್ದಾಲಿಕೆ, ಐಎಂಎ ಹಗರಣವನ್ನು ಸಿಬಿಐಗೆ ಒಪ್ಪಿಸಿದೆಯೋ ಅದೇ ರೀತಿಯಾಗಿ ಡಿ.ಕೆ.ಶಿವಕುಮಾರ್​ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ತನಿಖೆ ನಡೆಸಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್​​.ಹಿರೇಮಠ ಒತ್ತಾಯಿಸಿದರು.

ಡಿಕೆಶಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ತನಿಖೆ ನಡೆಸಬೇಕು:ಎಸ್.ಆರ್​​.ಹಿರೇಮಠ ಒತ್ತಾಯ

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ತೊಡಗಿದ್ದ ಡಿ.ಕೆ.ಶಿವಕುಮಾರ್ ಬಗ್ಗೆ ಐದು ವರ್ಷಗಳಿಂದ ಸುದೀರ್ಘವಾಗಿ ಸರ್ಕಾರಕ್ಕೆ ಮನವಿ ಸೇರಿದಂತೆ ದಾಖಲಾತಿಗಳ ಸಂಗ್ರಹಣೆ ಹಾಗೂ ವಿಶ್ಲೇಷಣೆ ಮಾಡಿರುವುದಕ್ಕೆ ಜಯ ಸಿಕ್ಕಿದೆ. ಇದೀಗ ಡಿಕೆಶಿ ಅವರನ್ನು ದೆಹಲಿಯ ತಿಹಾರ್ ಜೈಲಿಗೆ ಹಾಕಲಾಗಿದೆ. ಇದನ್ನು ರಾಜ್ಯ ಸರ್ಕಾರ ಈ ಹಿಂದೆಯೇ ಮಾಡಬೇಕಿತ್ತು. ಆದ್ರೆ, ವಿಳಂಬವಾದರೂ ನಮ್ಮ ಧೋರಣೆಯಂತೆಯೇ ನಡೆಯುತ್ತಿದೆ. ಜೊತೆಗೆ ಡಿ.ಕೆ.ಶಿವಕುಮಾರ 1989 ರಿಂದ 2019 ರವರೆಗೆ 30 ವರ್ಷಗಳ ಕಾಲ ದೇಶ ಹೊರದೇಶಗಳಲ್ಲಿ ಅಕ್ರಮ ಸಂಪಾದನೆ ಮಾಡಿದ ಅವ್ಯವಹಾರಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು. ಸಿಬಿಐ ಡಿ.ಕೆ.ಶಿ ವಿರುದ್ಧ ಭ್ರಷ್ಟಾಚಾರ ಕಾಯಿದೆ ಅಡಿಯಲ್ಲಿ ಕೇಸ್​ ದಾಖಲಿಸಿಕೊಂಡು ಅವ್ಯವಹಾರಗಳ ಒಟ್ಟು ಹಣವನ್ನು ಜಪ್ತಿ ಮಾಡಿಕೊಂಡು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದ್ರು.

ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ ಡಿಕೆಶಿ ಮಾಡಿದ ಅವ್ಯವಹಾರಗಳನ್ನು ಎಳೆ ಎಳೆಯಾಗಿ ಬಿಚ್ಚಿ, ಸಾರ್ವಜನಿಕರಿಗೆ ತಿಳಿಸುತ್ತಿರುವುದು ಒಳ್ಳೆಯ ಕೆಲಸವಾಗಿದೆ. ಭ್ರಷ್ಟರು ಸಾರ್ವಜನಿಕ ವಲಯದಲ್ಲಿ ಇರಬಾರದು. ಈ ದಿಸೆಯಲ್ಲಿ ಹಲವಾರು ನೊಂದ ಜನರು ಮನವಿ, ದಾಖಲಾತಿ ಕೊಟ್ಟಿದ್ದು, 300 ಕುಟುಂಬಗಳನ್ನು ಬೀದಿಗೆ ಹಾಕಲು ಡಿಕೆಶಿ ಅವರ ಆಪ್ತ ಸಚಿನ ನಾರಾಯಣ ಮುಂದಾಗಿದ್ದರು. ಈ ಬಗ್ಗೆ ದಾಖಲಾತಿಗಳನ್ನು ಜನರು ಕೊಟ್ಟು ಮನವಿ ಮಾಡಿದ್ದು, ಇದರ ಬಗ್ಗೆ ಸಹೋದರ ಸಂಸ್ಥೆ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದೆ ಎಂದರು.

ಅಲ್ಲದೇ ಮೈಸೂರಿನ ರಾಜ ಮನೆತನದ ವಿಶಾಲಾಕ್ಷಿ ದೇವಿಯವರು 5 ಕೋಟಿ ರೂ. ಹಣ ಅಕ್ರಮ ವರ್ಗಾವಣೆ ಮಾಡಿದ್ದ ಬಗ್ಗೆ ‌ಇಡಿ ತನಿಖೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ನಾವು ಸಂಗ್ರಹಿಸಿದ ಎಲ್ಲ ದಾಖಲೆಗಳನ್ನು ಇಡಿ, ಸಿಬಿಐ, ಎಸ್​​ ಐಟಿ, ಪ್ರಧಾನಿ, ವಿತ್ತ ಸಚಿವರಿಗೆ ಕಳಿಸಿ ಕೊಡಲಾಗುವುದು ಎಂದರು.

Intro:ಹುಬ್ಬಳ್ಳಿ-04

ರಾಜ್ಯ ಸರ್ಕಾರ ಯಾವ ರೀತಿಯಾಗಿ ಫೋನ್ ಕದ್ದಾಲಿಕೆ, ಐಎಂ ಎ ಹಗರಣವನ್ನು ಸಿಬಿಐ ಗೆ ಒಪ್ಪಿಸಿದೆಯೋ ಅದೇ ರೀತಿಯಾಗಿ ಡಿ.ಕೆ.ಶಿವಕುಮಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ತನಿಖೆ ನಡೆಸಬೇಕೆಂದು ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್.ಆರ್ ಹಿರೇಮಠ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ತೊಡಗಿದ್ದ ಡಿ.ಕೆ.ಶಿವಕುಮಾರ ಬಗ್ಗೆ ಐದು ವರ್ಷಗಳಿಂದ ಸುದೀರ್ಘವಾಗಿ ಸರ್ಕಾರಕ್ಕೆ ಮನವಿ ಸೇರಿದಂತೆ ದಾಖಲಾತಿಗಳ ಸಂಗ್ರಹಣೆ, ವಿಶ್ಲೇಷಣೆ ಮಾಡಿದಕ್ಕೆ ಇಂದು ಜಯ ಸಿಕ್ಕಿದ್ದು, ಡಿ.ಕೆ.ಶಿವಕುಮಾರ ಅವರನ್ನು ತಿಹಾರ ಜೈಲಿಗೆ ಹಾಕಲಾಗಿದೆ. ಇದನ್ನು ರಾಜ್ಯ ಸರ್ಕಾರ ಈ ಹಿಂದೆಯೇ ಮಾಡಬೇಕಿತ್ತು. ಆದರೆ ವಿಳಂಬವಾದರೂ ನಮ್ಮ ಧೋರಣೆಯಂತೆಯೇ ನಡೆಯುತ್ತಿದೆ. ಜೊತೆಗೆ ಡಿ.ಕೆ.ಶಿವಕುಮಾರ 1989 ರಿಂದ 2019 ರವರೆಗೆ 30 ವರ್ಷಗಳ ಕಾಲ ದೇಶ ಹೊರದೇಶಗಳಲ್ಲಿ ಅಕ್ರಮ ಸಂಪಾದನೆ ಮಾಡಿದ ಅವ್ಯವಹಾರಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು. ಸಿಬಿಐ ಡಿ.ಕೆ.ಶಿವಕುಮಾರ ವಿರುದ್ಧ ಭ್ರಷ್ಟಾಚಾರ ಕಾಯಿದೆ ಅಡಿಯಲ್ಲಿ ಕೇಸು ದಾಖಲಿಸಿಕೊಂಡು ಅವ್ಯವಹಾರಗಳ ಒಟ್ಟು ಹಣವನ್ನು ಜಪ್ತಿ ಮಾಡಿಕೊಂಡು ಕಠಿಣ ಶಿಕ್ಷೆಯನ್ನು ಕೊಡಬೇಕು ಎಂದರು.
ವಿಶೇಷ ನ್ಯಾಯಾಲಯದಲ್ಲಿ ಡಿಕೆಶಿ ಮಾಡಿದ್ದ ಅವ್ಯವಹಾರಗಳನ್ನು ಎಳೆ ಎಳೆಯಾಗಿ ಬಿಚ್ಚಿ ಸಾರ್ವಜನಿಕರಿಗೆ ತಿಳಿಸುತ್ತಿರುವುದು ಒಳ್ಳೆಯ ಕೆಲಸವಾಗಿದ್ದು, ಭ್ರಷ್ಟರು ಸಾರ್ವಜನಿಕ ವಲಯದಲ್ಲಿ ಇರಬಾರದು. ಈ ದಿಸೆಯಲ್ಲಿ ಹಲವಾರು ನೊಂದ ಜನರು ಮನವಿ, ದಾಖಲಾತಿಯನ್ನು ಕೊಟ್ಟಿದ್ದು, 300 ಕುಟುಂಬಗಳನ್ನು ಬೀದಿಗೆ ಹಾಕಲು ಡಿ.ಕೆ.ಶಿವಕುಮಾರ ಅವರ ಆಪ್ತ ಸಚಿನ ನಾರಾಯಣ ಮುಂದಾಗಿದ್ದರು. ಈ ಬಗ್ಗೆ ದಾಖಲಾತಿಗಳನ್ನು ಜನರು ಕೊಟ್ಟು ಮನವಿ ಮಾಡಿದ್ದು, ಇದರ ಬಗ್ಗೆ ಸಹೋದರ ಸಂಸ್ಥೆ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದೆ.‌ ಅಲ್ಲದೇ ಮೈಸೂರಿನ ರಾಜ್ಯ ಮನೆತನದ ವಿಶಾಲಾಕ್ಷಿ ದೇವಿಯವರು 5 ಕೋಟಿ ರೂ ಅಕ್ರಮ ಹಣ ವರ್ಗಾವಣೆ ಮಾಡಿದ್ದ ಬಗ್ಗೆ ‌ಇಡಿ ತನಿಖೆಗೆ ತೆಗೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ನಾವು ಸಂಗ್ರಹಿಸಿದ ಎಲ್ಲ ದಾಖಲೆಗಳನ್ನು ಇಡಿ, ಸಿಬಿಐ ಗೆ, ಎಸ್ ಐಟಿ, ಪ್ರಧಾನಿ, ವಿತ್ತ ಸಚಿವರಿಗೆ ಕಳಿಸಿ ಕೊಡಲಾಗುವುದು ಎಂದರು.
ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ಹಾನಿಯಾಗಿದೆ. ಕೂಡಲೇ ಕೇಂದ್ರ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಬೈಟ್- ಎಸ್ ಆರ್ ಹಿರೇಮಠ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥBody:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.