ETV Bharat / city

ರಾಜಸ್ಥಾನದ ಮಕ್ಕಳನ್ನ ಹೆತ್ತವರ ಮಡಿಲಿಗೆ ಸೇರಿಸಲು ನೆರವಾದ ಜಿಲ್ಲಾಧಿಕಾರಿ - District Collector Deepa Cholan

ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಹೆತ್ತ ಪಾಲಕರನ್ನ ಸೇರಲಾಗದೇ ಪರಿಚಯಸ್ಥರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದ ರಾಜಸ್ಥಾನದ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಹುಬ್ಬಳ್ಳಿ ತಹಶೀಲ್ದಾರ್​ ಶಶಿಧರ ಮಾಡ್ಯಾಳ ನೆರವಿನ ಹಸ್ತ ಚಾಚಿ, ಅವರನ್ನ ರಾಜಸ್ಥಾನಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

District Collector Deepa Cholan helped to Rajasthan children
ರಾಜಸ್ಥಾನದ ಮಕ್ಕಳನ್ನ ಹೆತ್ತವರ ಮಡಿಲಿಗೆ ಸೇರಿಸಲು ನೆರವಾದ ಜಿಲ್ಲಾಧಿಕಾರಿ
author img

By

Published : May 7, 2020, 3:12 PM IST

ಧಾರವಾಡ: ಲಾಕ್​ಡೌನ್ ಹಿನ್ನೆಲೆ, ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಹೆತ್ತ ಪಾಲಕರನ್ನ ಸೇರಲಾಗದೇ ಪರಿಚಯಸ್ಥರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದ ರಾಜಸ್ಥಾನದ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ನೆರವಿನಹಸ್ತ ಚಾಚಿದ್ದಾರೆ.

ರಾಜಸ್ಥಾನದ ಮಕ್ಕಳನ್ನ ಹೆತ್ತವರ ಮಡಿಲಿಗೆ ಸೇರಿಸಲು ನೆರವಾದ ಜಿಲ್ಲಾಧಿಕಾರಿ

ರಾಜಸ್ಥಾನ ಸರ್ಕಾರದ ಅಧಿಕಾರಿಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿ, ಅಗತ್ಯ ವಾಹನ ಪಾಸ್​ಗಳನ್ನ ಒದಗಿಸಿಕೊಟ್ಟಿದ್ದಾರೆ. ಕಳೆದ ಸುಮಾರು ಐವತ್ತು ದಿನಗಳ ಹಿಂದೆ ತಾಲಸಾರಾಮ್ ದಂಪತಿ ರಾಜಸ್ಥಾನದ ಸಿರೋಹಿ ಜಿಲ್ಲೆಯ ತಮ್ಮ ಸ್ವಗ್ರಾಮ ಮೆಮಂಡ್ವಾರಾಕ್ಕೆ ಅನಿವಾರ್ಯ ಕಾರಣಗಳಿಂದಾಗಿ ತೆರಳಿದ್ದರು. ಹಣಕಾಸಿನ ಮುಗ್ಗಟ್ಟಿನಿಂದಾಗಿ ಮಕ್ಕಳನ್ನು ಕರೆದುಕೊಂಡು‌ ಹೋಗಲು ಸಾಧ್ಯವಾಗದೇ ತಾವು ಬಾಡಿಗೆ ಇದ್ದ ಮನೆಯ ಮಾಲೀಕರಿಗೆ ಮಕ್ಕಳನ್ನ ಒಪ್ಪಿಸಿ, ತೆರಳಿದ್ದರು.

ಕೊರೊನಾ ನಿಯಂತ್ರಣಕ್ಕಾಗಿ ದಿಢೀರ್ ಲಾಕ್​ಡೌನ್ ಜಾರಿಯಾದ ಪರಿಣಾಮ, ಮರಳಿ ಹುಬ್ಬಳ್ಳಿಗೆ ಬರಲು ತಾಲಸಾರಾಮ್ ದಂಪತಿಗೆ ಸಾಧ್ಯವಾಗಿರಲಿಲ್ಲ. 10 ವರ್ಷದ ಬಾಲಕಿ ರೋಮುಕುಮಾರಿ ಹಾಗೂ 8 ವರ್ಷದ ಪೋಸುಕುಮಾರಿ ತಮ್ಮ ಪಾಲಕರನ್ನ ಸೇರಲು ಹಪಹಪಿಸುತ್ತಿರುವ ಕುರಿತು ಖಾಸಗಿ ವ್ಯಕ್ತಿಯೊಬ್ಬರು ಹುಬ್ಬಳ್ಳಿ ತಹಶೀಲ್ದಾರ್​ ಶಶಿಧರ ಮಾಡ್ಯಾಳ ಅವರಿಗೆ ಟ್ವೀಟ್​ ಮಾಡಿದ್ದರು. ಈ ವಿಷಯವನ್ನ ತಹಶೀಲ್ದಾರ್​ ಜಿಲ್ಲಾಧಿಕಾರಿ ಗಮನಕ್ಕೆ ತಂದು, ತಮ್ಮ ಸಿಬ್ಬಂದಿ ಮೂಲಕ ಖುದ್ದು ಪರಿಶೀಲಿಸಿ ವರದಿ ತರಿಸಿಕೊಂಡರು.

ಮಕ್ಕಳನ್ನು ತಮ್ಮ ಬಳಿ ಇರಿಸಿಕೊಂಡಿದ್ದ ರಮೇಶ್ ರಾವಲ್ ಅವರು ಸ್ವತಃ ತಮ್ಮ ಕಾರಿನ ಮೂಲಕ ಮಕ್ಕಳನ್ನು ರಾಜಸ್ಥಾನಕ್ಕೆ ಬಿಟ್ಟುಬರಲು ಮುಂದೆ ಬಂದಾಗ ತಹಶೀಲ್ದಾರ್​, ಮುತುವರ್ಜಿ ವಹಿಸಿ ಅಗತ್ಯ ಪರವಾನಗಿಯ ಏರ್ಪಾಡು ಮಾಡಿದ್ದಾರೆ. ಅಲ್ಲದೆ, ಮಾರ್ಗಮಧ್ಯೆ ಆಹಾರ ಮತ್ತು ಸೂರತ್​ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಮ್ಮ ಕಚೇರಿ ಆವರಣದಲ್ಲಿ ಮಕ್ಕಳಿಗೆ ಶುಭ ಹಾರೈಸಿ ಬೀಳ್ಕೊಟ್ಟ ಜಿಲ್ಲಾಧಿಕಾರಿ ದೀಪಾ ಚೋಳನ್, ಮಕ್ಕಳ ಶಿಕ್ಷಣದ ಬಗ್ಗೆ ಮಾಹಿತಿ ಪಡೆದು ಉತ್ತಮವಾಗಿ ಅಭ್ಯಾಸ ಮಾಡಲು ತಿಳಿಸಿದರು. ಮಕ್ಕಳನ್ನು ಸುರಕ್ಷಿತವಾಗಿ ಅವರ ಪಾಲಕರಿಗೆ ಒಪ್ಪಿಸಿ, ತಹಶೀಲ್ದಾರ್​ಗೆ ವರದಿ ನೀಡುವಂತೆ ಕರೆದೊಯ್ಯುತ್ತಿರುವ ವ್ಯಕ್ತಿಗಳಿಗೆ ಸೂಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.