ETV Bharat / city

ಜೆಡಿಎಸ್ ಮುಖಂಡನ ರಂಪಾಟ ಪ್ರಕರಣ : ಪಕ್ಷದ ವರಿಷ್ಠರ ಗಮನಕ್ಕೆ ವರದಿ ನೀಡಿದ ಹುಣಸಿಮರದ

author img

By

Published : Sep 13, 2021, 5:30 PM IST

ಶ್ರೀಕಾಂತ ಜಮನಾಳ ಎಂಎಲ್ಎ ಎಲೆಕ್ಷನ್‌ಗೆ ಕೊನೆಯ ಬಾರಿ ನಿಂತಿದ್ದರು. ಆ ಬಳಿಕ ಯಾವುದೇ ಸಭೆ-ಸಮಾರಂಭಗಳಿಗೆ ಬಂದಿಲ್ಲ. ಯಾವ ಸಭೆಗೂ ಅವರನ್ನು ಆಹ್ವಾನ ಮಾಡಿಲ್ಲ. ಈಗ ನಡೆದಿರುವ ಘಟನೆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ..

ಗುರುರಾಜ್ ಹುಣಸಿಮರದ
ಗುರುರಾಜ್ ಹುಣಸಿಮರದ

ಧಾರವಾಡ : ಮಹಿಳೆಯ ಕೈ ಹಿಡಿದು ಜೆಡಿಎಸ್ ಮುಖಂಡ ಎಳೆದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳಿ-ಧಾರವಾಡ ಮಹಾನಗರ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ್ ಹುಣಸಿಮರದ ಪ್ರತಿಕ್ರಿಯಿಸಿದ್ದಾರೆ.

ಧಾರವಾಡದ ಸರ್ಕೀಟ್ ಹೌಸ್​​ನಲ್ಲಿ ಗುರುರಾಜ್ ಹುಣಸಿಮರದ ಮಾತನಾಡಿರುವುದು..

ಶ್ರೀಕಾಂತ ಜಮನಾಳ ಎಂಎಲ್ಎ ಎಲೆಕ್ಷನ್‌ಗೆ ಕೊನೆಯ ಬಾರಿ ನಿಂತಿದ್ದರು. ಆ ಬಳಿಕ ಯಾವುದೇ ಸಭೆ-ಸಮಾರಂಭಗಳಿಗೆ ಬಂದಿಲ್ಲ. ಯಾವ ಸಭೆಗೂ ಅವರನ್ನು ಆಹ್ವಾನ ಮಾಡಿಲ್ಲ. ಈಗ ನಡೆದಿರುವ ಘಟನೆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡನ ವಿರುದ್ಧ ಮಹಿಳೆಯಿಂದ ಪೊಲೀಸರಿಗೆ ದೂರು

ಧಾರವಾಡದ ಸರ್ಕೀಟ್ ಹೌಸ್​​ನಲ್ಲಿ ಮಾತನಾಡಿದ ಅವರು, ಈಗಾಗಲೇ ಮೇಲಿನವರಿಗೆ ವರದಿ ಕಳುಹಿಸಿದ್ದೇವೆ. ವರಿಷ್ಠರ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ. ಆ ರೀತಿ ಮಹಿಳೆಯನ್ನು ಎಳೆದಾಡಿದ್ದು ತಪ್ಪು.

ಆದರೆ, ಅವರಿಬ್ಬರ ವೈಯಕ್ತಿಕ ವಿಚಾರ ಏನಿದೆಯೋ ಅದು ಸಹ ನಮಗೆ ಗೊತ್ತಿಲ್ಲ. ನಾಳೆ ಬೆಂಗಳೂರಿನಲ್ಲಿ ಪಕ್ಷದ ಸಭೆಯೂ ಇದೆ‌. ಆ ಸಭೆಯಲ್ಲಿಯೂ ವಿಷಯ ಪ್ರಸ್ತಾಪ ಮಾಡುತ್ತೇನೆ ಎಂದರು.

ಇವಿಎಂ ಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹುಣಸಿಮರದ, ಪಾಲಿಕೆ ಚುನಾವಣೆ ವೇಳೆ ಚುನಾವಣಾ ಆಯೋಗದ ಅಧಿಕಾರಿಗಳು ಸರ್ಕಾರದ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.