ಹುಬ್ಬಳ್ಳಿ: ಅಕಾಲಿಕ ಮಳೆಯಿಂದ ಅನ್ನದಾತರ ಬದುಕು ಅಯೋಮಯವಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಬೆಳೆ ವಿಮೆ ಕಂಪನಿಗಳು ಬೆಳೆಹಾನಿಗೆ ಸಂಬಂಧಿಸಿದಂತೆ 72 ಗಂಟೆಯೊಳಗೆ ಅರ್ಜಿ ಕೊಡಲು ಸೂಚಿಸಿವೆ. ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ನೀಡುವಂತೆ ತಿಳಿಸಿದ ಬೆಳೆ ವಿಮೆ ಕಂಪನಿಗಳು ಕಡಿಮೆ ಅವಧಿಯಲ್ಲಿಯೇ ಅರ್ಜಿ ಸ್ವೀಕಾರಕ್ಕೆ ಮುಂದಾಗಿವೆ. ಆದರೆ ಈ ವಿಷಯ ಅದೆಷ್ಟೋ ರೈತರಿಗೆ ಗೊತ್ತೇ ಇಲ್ಲ. ಇದೀಗ ಬೆಳೆ ವಿಮೆ ಕಂಪನಿ ನೀಡಿದ ಕಾಲಾವಧಿ ಮುಕ್ತಾಯವಾಗಿದ್ದು, ಇದರಿಂದ ಬಹಳಷ್ಟು ರೈತರಿಗೆ ಪರಿಹಾರ ಸಿಗುವುದು ಅನುಮಾನ ಎನ್ನಲಾಗ್ತಿದೆ.
ಆದರೂ ರೈತ ಸಂಪರ್ಕ ಕೇಂದ್ರಗಳ ಮುಂದೆ ಅರ್ಜಿ ನೀಡಲು ರೈತರು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಒಂದು ಕಡೆ ನೀಡಿದ ಕಾಲಾವಕಾಶ ಮುಕ್ತಾಯ, ಇನ್ನೊಂದೆಡೆ ಎಲ್ಲಿ ಪರಿಹಾರ ತಮ್ಮ ಕೈ ತಪ್ಪುತ್ತೋ ಎನ್ನುವ ಭಯ. ಇದೇ ಕಾರಣಕ್ಕೆ ರೈತರಲ್ಲಿ ಸಾಕಷ್ಟು ಗೊಂದಲ ನಿರ್ಮಾಣವಾಗಿದೆ. ಅಲ್ಲದೇ ತಮ್ಮ ನಿತ್ಯದ ಕೆಲಸ ಬಿಟ್ಟು ಅರ್ಜಿ ಸಲ್ಲಿಸಲು ಸರತಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅವಧಿಯನ್ನು ವಿಸ್ತರಣೆ ಮಾಡಿ ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸುವ ಕಾರ್ಯವನ್ನು ಮಾಡಬೇಕಿದೆ.
ಇದನ್ನೂ ಓದಿ: ಬಾಲಕನ ಸ್ನೇಹ ಬೆಳೆಸಿ ಕೊಲೆ ಬೆದರಿಕೆ.. ಬಾಗಲಕೋಟೆಯಲ್ಲಿ ಬ್ಲ್ಯಾಕ್ಮೇಲ್ ಮಾಡಿ 13 ಲಕ್ಷ ರೂ. ದೋಚಿದ್ದ ಖದೀಮ ಅರೆಸ್ಟ್