ETV Bharat / city

ಹುಬ್ಬಳ್ಳಿ: ತುರ್ತು ಸ್ಪಂದನ ವ್ಯವಸ್ಥೆ112 ಚಾಲನೆ

ತುರ್ತು ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ ಹಾಗು ಅಂಬ್ಯುಲೆನ್ಸ್‌ಗಾಗಿ ಕರೆ ಮಾಡಲು ತುರ್ತು ಸ್ಪಂದನ ವ್ಯವಸ್ಥೆ ಸಂಖ್ಯೆ 112ಕ್ಕೆ ಇಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್ ಚಾಲನೆ ನೀಡಿದರು.

hoysalas-vehicle
ಹೊಯ್ಸಳ ಗಸ್ತು ವಾಹನ
author img

By

Published : Dec 15, 2020, 1:05 PM IST

ಹುಬ್ಬಳ್ಳಿ : ತುರ್ತು ಸ್ಪಂದನ ವ್ಯವಸ್ಥೆ ಸಂಖ್ಯೆ 112ಕ್ಕೆ ನಿಯೋಜಿಸಲಾಗಿರುವ ಹೊಯ್ಸಳ ಗಸ್ತು ವಾಹನಗಳಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು, ತುರ್ತು ಸೇವೆಗೆ ಕರೆ ಮಾಡಿದ 15 ಸೆಕೆಂಡುಗಳಲ್ಲಿ ಕರೆ ಸ್ವೀಕರಿಸಿ, ಹತ್ತು ನಿಮಿಷದ ಒಳಗಾಗಿ ಅಗತ್ಯ ಪೊಲೀಸ್ ನೆರವು ಒದಗಿಸಲಾಗುವುದು. ಸಾರ್ವಜನಿಕರು‌ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್

ಸರ್ಕಾರದ ನಿರ್ದೇಶನದಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 15 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ತುರ್ತು ಸ್ಪಂದನ ವ್ಯವಸ್ಥೆ ವಾಹನಗಳನ್ನು ನಿಯೋಜಿಸಲಾಗಿದೆ. ಈ ವಾಹನಗಳು‌ 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ.‌ ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸುವ ಪೊಲೀಸ್ ತಂಡವು ಅಗತ್ಯ ಸಹಾಯ ಒದಗಿಸುವುದಾಗಿ ತಿಳಿಸಿದರು.

ಅಲ್ಲದೇ ಸಾರ್ವಜನಿಕರು ಪೊಲೀಸ್ ದೂರುಗಳಿಗೆ ಸಂಬಂಧಿಸಿದಂತೆ ನೇರವಾಗಿ 112 ಗೆ ಕರೆ ಮಾಡಬಹುದು. ತುರ್ತು ಸ್ಪಂದನ ವ್ಯವಸ್ಥೆಗೆ ಸಂಬಂಧಪಟ್ಟಂತೆ ಆ್ಯಪ್‌ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ 112 India mobile app ಸಹ ಡೌನ್ ಲೋಡ್ ಮಾಡಿಕೊಳ್ಳಬಹುದು. 112hubdwd@gmail.com ಗೆ ಮೇಲ್ ಮಾಡಿ ಸಹ ದೂರು ಸಲ್ಲಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಡಿ. ಬಸರಗಿ ಸೇರಿದಂತೆ ‌ಇತರೆ ಪೊಲೀಸ್ ಅಧಿಕಾರಿಗಳು ‌ಉಪಸ್ಥಿತರಿದ್ದರು.

ಓದಿ...ವಿಧಾನಪರಿಷತ್​ನಲ್ಲಿ ಕೈ-ಕಮಲ ಸದಸ್ಯರ ನಡುವೆ ತಳ್ಳಾಟ-ನೂಕಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.