ಹುಬ್ಬಳ್ಳಿ: ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಬುಧವಾರ ನಗರದಾದ್ಯಂತ ಪ್ರತಿಭಟನೆ ನಡೆಸಿದ್ದರು. ಇನ್ನೊಂದೆಡೆ ಆ.6 ರಂದು ಸಂಪೂರ್ಣ ಧಾರವಾಡ ಬಂದ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗುತ್ತಿದೆ. ಇದು ಸುಳ್ಳು ಯಾರು ಇದನ್ನ ನಂಬಬೇಡಿ.
ಅರವಿಂದ ಬೆಲ್ಲದ ಆಗಲಿ ಅವರು ಅಭಿಮಾನಿಗಳಾಗಲಿ ಯಾವುದೇ ಪ್ರತಿಭಟನೆ, ಬಂದ್ಗೆ ಕರೆ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ಧಾರವಾಡ ಬಂದ್ ಎಂಬ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಇದು ಸುಳ್ಳು ಸುದ್ದಿಯಾಗಿದ್ದು, ನಾಳೆ ಯಾವುದೇ ಬಂದ್, ಪ್ರತಿಭಟನೆ ಇಲ್ಲ ಎಂದು ಅರವಿಂದ ಬೆಲ್ಲದ ಆಪ್ತರು ಸ್ಪಷ್ಟಪಡಿಸಿದ್ದಾರೆ.