ETV Bharat / city

ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಸಹೋದರಿಗೆ ಸುತ್ತಿಗೆಯಿಂದ ಹೊಡೆದ ಕಿಡಿಗೇಡಿ: ಸಿಸಿಟಿವಿ ದೃಶ್ಯ - ಸಿಸಿಟಿವಿಯಲ್ಲಿ ಸೆರೆ ಕ್ರೈಂ ದೃಶ್ಯ

ಫಾತಿಮಾ ಎಂಬ ಮಹಿಳೆ ತನ್ನ ಸಹೋದರನಿಗೆ 30 ಸಾವಿರ ರೂ ನೀಡಿದ್ದರು. ಈ ಹಣವನ್ನು ಮರಳಿ ಕೊಡುವಂತೆ​ ಕೇಳಿದ್ದಕ್ಕೆ ಆತ ಸುತ್ತಿಗೆಯಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದಾನೆ.

Assault for asking for money back: scene captured in CCTV footage
ಹಣ ವಾಪಾಸ್ ಕೇಳಿದ್ದಕ್ಕೆ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
author img

By

Published : Jul 8, 2022, 7:33 AM IST

ಧಾರವಾಡ: ಹಣ ವಾಪಸ್ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ತನ್ನ ಸಹೋದರಿಗೆ ರಸ್ತೆ ಬದಿಯಲ್ಲಿ ಸುತ್ತಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಧಾರವಾಡದ ಮೆಹಬೂಬ್ ನಗರದ ದೊಡ್ಮನಿ ಮದುವೆ ಮಂಟಪದ ಎದುರು ಘಟನೆ ನಡೆಯಿತು. ಆಜಾದ್ ನಗರದ ಫಾತಿಮಾ ಎಂಬಾಕೆ ಇಕ್ಬಾಲ್​ಗೆ 30 ಸಾವಿರ ರೂ ಹಣ ನೀಡಿದ್ದಳು. ಈ ಹಣವನ್ನು ಮರಳಿ ಕೊಡುವಂತೆ ಕೇಳಿದ್ದಕ್ಕೆ ಆತ ದಾಳಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ರಸ್ತೆ ಬದಿ ಇಬ್ಬರು ನಿಂತಿರುವ ಸಮಯದಲ್ಲಿ ಮಹಿಳೆಯ ತಲೆಗೆ ಇಕ್ಬಾಲ್ ಸುತ್ತಿಗೆಯಿಂದ ಬಲವಾಗಿ ನಾಲ್ಕು ಬಾರಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂದ ಫಾತಿಮಾ ತಕ್ಷಣ ಕುಸಿದು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌‌.

ಇದನ್ನೂ ಓದಿ: ಟೆರೇಸ್​ಗೆ ಕರೆದೊಯ್ದು 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಇಬ್ಬರು ಅಪ್ರಾಪ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.