ಧಾರವಾಡ: ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಶಿವರಾಂ ಶನಿವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಗಣ್ಯರು, ಕನ್ನಡ ಚಿತ್ರರಂಗದವರು ಸಂತಾಪ ಸೂಚಿಸಿದ್ದಾರೆ. ಧಾರವಾಡದ ಯುವ ಕಲಾವಿದನೋರ್ವ ಚಾರ್ಕೋಲ್ ಆರ್ಟ್(ಇದ್ದಿಲು ಪುಡಿ) ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.
ಧಾರವಾಡದ ಕೆಲಗೇರಿಯ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರ ಪುತ್ರ ವಿನಾಯಕ ಹಿರೇಮಠ, ಬಿಳಿ ಹಾಳೆಯ ಮೇಲೆ ಇದ್ದಿಲು ಪುಡಿಯಿಂದ ಸುಮಾರು 3 ಗಂಟೆಗಳ ಕಾಲ ಸತತವಾಗಿ ಶಿವರಾಂ ಅವರ ಭಾವಚಿತ್ರ ಬಿಡಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಇದನ್ನೂ ಓದಿ: ನಟ ಶಿವರಾಮ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮುತಾಲಿಕ್