ETV Bharat / city

ಸಿದ್ಧಾರೂಢ ಮಠದ ಆವರಣದಲ್ಲಿ ಜಾನಪದ ಕಲೆಗಳ ಅನಾವರಣ

author img

By

Published : Jan 13, 2020, 11:06 AM IST

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಹುಬ್ಬಳ್ಳಿಯ ಜನತೆಗೆ ಜನಪದ ಸೊಗಡು ಸವಿಯಲು ಒಂದು ಸುವರ್ಣ ಅವಕಾಶ ಕಲ್ಪಿಸಿದ್ದು, ರಾಜ್ಯದ ವಿವಿಧಡೆಯಿಂದ ಆಗಮಿಸಿದ್ದ 30‌ ಕಲಾ ತಂಡಗಳು ತಮ್ಮ ವಿಶಿಷ್ಟ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರಿಂದ ಮೆಚ್ಚುಗೆಯ ಕರತಾಡನ, ಸಿಳ್ಳೆಗಳನ್ನು ಗಿಟ್ಟಿಸಿಕೊಂಡವು.

Kn_hbl_01_janapada_jatre_jalak_av_7208089
ಸಿದ್ಧಾರೂಢ ಮಠದ ಆವರಣದಲ್ಲಿ ಜಾನಪದ ಕಲೆಗಳ ಅನಾವರಣ, ಪ್ರೇಕ್ಷಕರ ಮೆಚ್ಚುಗೆಯ ಕರತಾಡನ

ಹುಬ್ಬಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಹುಬ್ಬಳ್ಳಿಯ ಜನತೆಗೆ ಜನಪದ ಸೊಗಡು ಸವಿಯಲು ಒಂದು ಸುವರ್ಣ ಅವಕಾಶ ಕಲ್ಪಿಸಿದ್ದು, ರಾಜ್ಯದ ವಿವಿಧಡೆಯಿಂದ ಆಗಮಿಸಿದ್ದ 30‌ ಕಲಾ ತಂಡಗಳು ತಮ್ಮ ವಿಶಿಷ್ಟ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರಿಂದ ಮೆಚ್ಚುಗೆಯ ಕರತಾಡನ, ಸಿಳ್ಳೆಗಳನ್ನು ಗಿಟ್ಟಿಸಿಕೊಂಡವು.

ಸಿದ್ಧಾರೂಢ ಮಠದ ಆವರಣದಲ್ಲಿ ಜಾನಪದ ಕಲೆಗಳ ಅನಾವರಣ
ಸಿದ್ಧಾರೂಢ ಮಠದ ಆವರಣದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಜಾನಪದ ಕಲೆಗಳು ಅನಾವರಣಗೊಂಡ ಪರಿ ಅನನ್ಯ. ಜನಪದ ಕಲೆಗಳನ್ನು ತಮ್ಮ ಒಡಲೊಳಗೆ ಇಟ್ಟುಕೊಂಡು ಕಾಪಾಡುತ್ತಿರುವ ಮಹಿಳಾ ಕಲಾವಿದರು, ನೋಡುಗರು ಹುಬ್ಬೇರಿಸುವಂತೆ ತಮ್ಮ ಪ್ರದರ್ಶನ ನೀಡಿ ಮನಸೂರೆಗೊಂಡರು. ಚಿಕ್ಕಮಗಳೂರಿನ ಕಲ್ಪನಾ ಮಹಿಳಾ ತಂಡ ಗಂಡು ಕಲೆಯಂದೇ ಪ್ರಸಿದ್ಧಿ ಪಡೆದ ವೀರಗಾಸೆಯನ್ನು ಪ್ರಸ್ತತಪಡಿಸಿತು. ಶಿವಮೊಗ್ಗದಿಂದ ಆಗಮಿಸಿದ್ದ ರೂಪಾ ತಂಡಾ ವಿಶಿಷ್ಟ ಉಡುಗೆ ತೊಟ್ಟು ಲಂಬಾಣಿ‌ ಹಾಡು ಹಾಗೂ ನೃತ್ಯಗಳನ್ನು ಮಾಡಿದರು.ಬುಡಕಟ್ಟು ಸಂಸ್ಕೃತಿ ಪರಿಚಯಸಿದ ಡಮಾಮಿ ಹಾಗೂ ಪುಗಡಿ ನೃತ್ಯ:

ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಜನಾಂಗ ಭಾರತದ ವೈವಿಧ್ಯತೆಯಲ್ಲಿ ಬೆರತು ಹೋದ ಆಫ್ರಿಕನ್ ಮೂಲದವರು. ತಮ್ಮ ಮೂಲ ಖಂಡದ ಸಂಸ್ಕೃತಿ ಬೇರು ಅವರಲ್ಲಿ ಉಳಿದು ಬಂದಿದೆ. ಇದರ ಕುರುಹು ಎಂಬಂತೆ ಡಮಾಮಿ ಹಾಗೂ ಪುಗಡಿ ನೃತ್ಯಗಳನ್ನು ಕಾರವಾರದಿಂದ ಆಗಮಿಸಿದ ಸುಮಿತ್ರ ಎಸ್.ಸಿ. ಹಾಗೂ ಜಾನಕಿ ತಂಡಗಳು ವಿಶಿಷ್ಟ ಹಾಡಿನೊಂದಿಗೆ ಪ್ರದರ್ಶಿಸಿದರು.

ಮಂಡ್ಯ ಪೂಜಾ ಕುಣಿತ, ರಾಮನಗರದ ಪಟ ಕುಣಿತ, ಕೋಲಾರದ ಹುಲಿವೇಶ, ಬಳ್ಳಾರಿಯ ಹಗಲುವೇಷ ಪ್ರಕ್ಷೇಕರನ್ನು ರಂಜಿಸಿದವು. ಚಾಮರಾಜನರದ ನೀಲಗಾರ ಪದ, ವಿಜಯಪುರದ ಗೀಗಿ ಪದ, ಬೆಳಗಾವಿಯ ಭಜನೆ ಪದ, ಬಾಗಕೋಟೆಯ ಚೌಡಕಿ ಪದ ಸೇರಿದಂತೆ ಧಾರವಾಡ ಕಲಾವಿದರು ತತ್ವಪದ, ಸೋಬಾನೆ ಪದಗಳನ್ನು ಹಾಡಿದರು. ಧಾರವಾಡ ಭಾಗ್ಯಶ್ರೀ, ಅಭಿವ್ಯಕ್ತಿ, ಹುಬ್ಬಳ್ಳಿ ಸದಾನಂದ ಹಾಗೂ ರಾಧ ಕೃಷ್ಣ ತಂಡಗಳು ಹಲವು ಜನಪದ ಗೀತಗಳ ರೂಪಕವನ್ನು ಪ್ರಸ್ತತಪಡಿಸಿದವು. ಇದರೊಂದಿಗೆ ಚಿತ್ರದುರ್ಗದ ಕಹಳೆ, ಮೈಸೂರಿನ ಕಂಸಾಳೆ ಹಾಗೂ ನಾಗರಿ, ಮಂಡ್ಯದ ತಮಟೆ, ಉಡುಪಿಯ ಚಂಡೆ ವಾದನ, ಧಾರವಾಡದ ಕರಡಿ ಮಜಲು ಹಾಗೂ ಜಗ್ಗಲಿಗೆಗಳ ಧ್ವನಿ ಜಾನಪದ ಜಾತ್ರೆಯಲ್ಲಿ ಮಾರ್ದನಿಸಿತು.

Intro:ಹುಬ್ಬಳ್ಳಿ-01
ಅದೊಂದು ಕನ್ನಿರ ಲೋಕ‌, ಸಿದ್ಧಾರೂಢ ಮಠದ ಆವರಣದಲ್ಲಿ ನಿರ್ಮಿಸಿದ ಭವ್ಯ ವೇದಿಕೆಯಲ್ಲಿ ಜಾನಪದ ಕಲೆಗಳು ಅನಾವರಣಗೊಂಡ ಪರಿ ಅನನ್ಯ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಹುಬ್ಬಳ್ಳಿಯ ಜನತೆಗೆ ಜನಪದ ಸೊಗಡು ಅವುಗಳನ್ನು ಸವಿಯಲು ಒಂದು ಸುವರ್ಣ ಅವಕಾಶ ಕಲ್ಪಿಸಿತ್ತು. ರಾಜ್ಯದ ವಿವಿಧಡೆಯಿಂದ ಆಗಮಿಸಿದ್ದ 30‌ ಕಲಾತಂಡಗಳು ತಮ್ಮ ವಿಶಿಷ್ಟ ಕಲಾಪ್ರಕಾರಗಳನ್ನು ತಡರಾತ್ರಿಯವರೆಗೂ ವೇದಿಕೆಯ ಮೇಲೆ ಪ್ರಸ್ತುತ ಪಡಿಸುವ ಕಲಾ ತಂಡಗಳು ಪ್ರೇಕ್ಷಕರ ಮೆಚ್ಚುಗೆಯ ಕರತಾಡನ, ಸಿಳ್ಳೆಗಳನ್ನು ಗಿಟ್ಟಿಸಿಕೊಂಡರು‌.

*ಮನಸೂರೆ ಗೊಂಡ ಮಹಿಳಾ ನೃತ್ಯಗಳು*

ಜನಪದ ಕಳೆಗಳನ್ನು ತಮ್ಮ ಒಡಲೊಳಗೆ ಇಟ್ಟುಕೊಂಡು ಕಾಪಾಡುತ್ತಿರುವ ಮಹಿಳಾ ಕಲಾವಿದರು, ನೋಡುಗರು ಹುಬ್ಬೇರಿಸುವಂತೆ ತಮ್ಮ ಪ್ರದರ್ಶನ ನೀಡಿ ಮನಸೂರೆಗೊಂಡರು. ಚಿಕ್ಕಮಗಳೂರಿನ ಕಲ್ಪನಾ ಮಹಿಳಾ ತಂಡ ಗಂಡು ಕಲೆಯಂದೆ ಪ್ರಸಿದ್ದಿ ಪಡೆದ ವೀರಗಾಸೆಯನ್ನು ಪ್ರಸ್ತತ ಪಡಿಸಿತು. ಶಿವಮೊಗ್ಗದಿಂದ ಆಗಮಿಸಿದ ರೂಪಾ ತಂಡಾ ವಿಶಿಷ್ಟ ತೊಡುಗೆ ತೊಟ್ಟು ಲಂಬಾಣಿ‌ ಹಾಡು ಹಾಗೂ ನತ್ಯಗಳನ್ನು ಮಾಡಿದರು.

*ಬುಡಕಟ್ಟು ಸಂಸ್ಕೃತಿ ಪರಿಚಯಸಿದ ಡಮಾಮಿ ಹಾಗೂ ಪುಗಡಿ ನೃತ್ಯ*

ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗ ಭಾರತದ ವೈವಿದ್ಯತೆಯಲ್ಲಿ ಬೆರತು ಹೋದ ಆಫ್ರಿಕನ್ ಮೂಲದವರು. ತಮ್ಮ ಮೂಲ ಖಂಡ ಸಂಸ್ಕೃತಿ ಬೇರುಗಳು ಅವರಲ್ಲಿ ಉಳಿದು ಬಂದಿದೆ. ಇದರ ಕುರುಹೆ ಡಮಾಮಿ ಹಾಗೂ ಪುಗಡಿ ನೃತ್ಯಗಳನ್ನು ಕಾರವಾರದಿಂದ ಆಗಮಿಸಿ ಸುಮಿತ್ರ ಎಸ್.ಸಿ ಹಾಗೂ ಜಾನಕಿ ತಂಡಗಳು
ಡಮಾಮಿ ಹಾಗೂ ಪುಗಡಿ ನೃತ್ಯಗಳನ್ನು ತಮ್ಮ ವಿಶಿಷ್ಟ ಹಾಡಿನೊಂದಿಗೆ ಪ್ರೇಕ್ಷಕರೆದರು ತೆರೆದಿಟ್ಟರು.

ಮಂಡ್ಯ ಪೂಜಾ ಕುಣಿತ , ರಾಮನಗರದ ಪಟ ಕುಣಿತ, ಕೋಲಾರದ ಹುಲಿವೇಶ, ಬಳ್ಳಾರಿಯ ಹಗಲುವೇಷ ಪ್ರಕ್ಷೇಕರನ್ನು ರಂಜಿಸಿದವು.

ಚಾಮರಾಜನರದ ನೀಲಗಾರ ಪದ, ವಿಜಯಪರದ ಗೀಗಿಪದ, ಬೆಳಗಾವಿಯ ಭಜನೆಪದ, ಬಾಗಕೋಟೆಯ ಚೌಡಕಿ ಪದ ಸೇರಿದಂತೆ ಧಾರವಾದ ಕಲಾವಿದರು ತತ್ವಪದ, ಸೋಬಾನೆ ಪದಗಳನ್ನು ಹಾಡಿದರು.

ಧಾರವಾಡ ಭಾಗ್ಯಶ್ರೀ, ಅಭಿವ್ಯಕ್ತಿ, ಹುಬ್ಬಳ್ಳಿ ಸದಾನಂದ ಹಾಗೂ ರಾಧ ಕೃಷ್ಣ ತಂಡಗಳು ಹಲವು ಜನಪದ ಗೀತಗಳ ರೂಪಕವನ್ನು ಪ್ರಸ್ತತ ಪಡಿಸಿದರು.

ಇದರೊಂದಿಗೆ ಚಿತ್ರದುರ್ಗದ ಕಹಳೆ, ಮೈಸೂರಿನ ಕಂಸಾಳೆ ಹಾಗೂ ನಾಗರಿ, ಮಂಡ್ಯದ ತಮಟೆ, ಉಡುಪಿಯ ಚಂಡೆ ವಾದನ, ಧಾರವಾಡ ಕರಡಿ ಮಜಲು ಹಾಗೂ ಜಗ್ಗಲಿಗೆಗಳ ಧ್ವನಿ ಜಾನಪದ ಜಾತ್ರೆಯಲ್ಲಿ ಮಾರ್ಧನಿಸಿತು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.