ETV Bharat / city

ಮೂರು ಪಾಲಿಕೆಗಳಲ್ಲಿ‌ ಅಧಿಕಾರಕ್ಕೆ ಬಂದ್ರೆ, ನಾವು ನೀಡಿದ ಭರವಸೆ ಈಡೇರಿಸುತ್ತೇವೆ: ಡಿ‌ಕೆಶಿ

author img

By

Published : Aug 29, 2021, 12:23 PM IST

Updated : Aug 29, 2021, 12:36 PM IST

ಹುಬ್ಬಳ್ಳಿ-ಧಾರವಾಡ, ಕಲಬುರಗಿ ಹಾಗೂ ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸಿದರೆ ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.

dks
ಡಿ‌ಕೆಶಿ

ಹುಬ್ಬಳ್ಳಿ: ಕೇಂದ್ರ, ರಾಜ್ಯ ಹಾಗು ಕಳೆದ 15 ವರ್ಷಗಳಿಂದ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಇದ್ರೂ ಹುಬ್ಬಳ್ಳಿ-ಧಾರವಾಡದ ಅಭಿವೃದ್ದಿ ಮಾಡಿಲ್ಲ.‌ ಜನರಿಗೆ ಬಿಜೆಪಿ ಸುಳ್ಳಿನ ಸರಮಾಲೆ ಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಲ್ಲಿರುವಂತಹ ಬಿಜೆಪಿ ಸ್ನೇಹಿತರು ಹಾಗೂ ಕೇಂದ್ರ ಸಚಿವರು ಇದಕ್ಕೆ ಉತ್ತರ ಕೊಡಬೇಕು. ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಏಕೆ ಮಾಡ್ತಾ ಇದೀರಾ? ನಿಮಗೆ ಜನರು ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಡಿಕೆಶಿ ಸುದ್ದಿಗೋಷ್ಠಿ

ಹುಬ್ಬಳ್ಳಿ-ಧಾರವಾಡ ನಗರ ಗುಂಡಿಗಳ ನಗರವಾಗಿದೆ. ಇಲ್ಲಿ ಡ್ಯಾನ್ಸ್ ಕಲಿಯಬೇಕಾಗಿಲ್ಲ, ಇಲ್ಲಿನ ರಸ್ತೆಗಳು ಡ್ಯಾನ್ಸ್ ಹೇಳಿಕೊಡ್ತವೆ. ಹೊರಗಡೆ ಬಂದ್ರೆ ಧೂಳಿನಿಂದ ಬಟ್ಟೆಯ ಬಣ್ಣ ಚೇಂಜ್​ ಆಗುತ್ತೆ. ಹುಬ್ಬಳ್ಳಿಯಿಂದ ಹೋಗುವಾಗ ನಾನು ಬಟ್ಟೆ ಬಿಚ್ಚಿಟ್ಟು ಹೋಗುವ ಸ್ಥಿತಿ‌ ಇದೆ ಎಂದು ವ್ಯಂಗ್ಯವಾಡಿದ ಶಿವಕುಮಾರ್, ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ ಹಾಗೂ ಮುಖ್ಯಮಂತ್ರಿ ಸಾಹೇಬರು ಇತ್ತ ಕಡೆ ನೋಡಬೇಕು. ಇಲ್ಲಿ ನೀವು ಬಂದು ಕೆಲಸ‌ ಮಾಡೋದು ಬೇಡ, ನಿಮ್ಮ ಅಧಿಕಾರಿಗಳನ್ನು ಕಳುಹಿಸಿ ಕೆಲಸ ಮಾಡಿಸಿ ಎಂದರು.

ಇದನ್ನೂ ಓದಿ: ಹು-ಧಾ ಪಾಲಿಕೆ ಚುನಾವಣೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬೆಳ್ಳಂ ಬೆಳಗ್ಗೆ ಟೆಂಪಲ್​ ರನ್​

ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತದೆ

ಹುಬ್ಬಳ್ಳಿ-ಧಾರವಾಡ, ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಪಾಲಿಕೆ ಚುನಾವಣೆ ನಡೆಯುತ್ತಿದೆ. ನಾನು ನಮ್ಮ ಮತದಾರರಲ್ಲಿ ಮನವಿ ಮಾಡ್ತಾ ಇದೀದಿ, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತೆಗೆದುಕೊಂಡು ಬನ್ನಿ. 60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೆವೆ. ನಾನು ಪ್ರಮಾಣ ಮಾಡ್ತೀನಿ, ನಮ್ಮ ಪಕ್ಷದ ಸಿದ್ದಾಂತದ ಮೇಲೆ ನಿಮಗೆ ಮಾತು ಕೋಡ್ತೇನೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತದೆ, ಪ್ರಾಮಾಣಿಕವಾಗಿ ಜನತೆಯ ಸೇವೆ ಮಾಡಲಿದ್ದೇವೆ. ಪಾಲಿಕೆಗೆ ತುಂಬುತ್ತಿರುವ ಶೇ.50ಷ್ಟು ತೆರಿಗೆಯನ್ನು ಕಡಿಮೆ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದರು.

ಭ್ರಷ್ಟಾಚಾರದಲ್ಲಿ ರಾಜ್ಯವೇ ನಂಬರ್ ಒನ್

ಕೋವಿಡ್​ ಸಾಂಕ್ರಾಮಿಕದ ವೇಳೆ ಬಿಜೆಪಿ ಸರ್ಕಾರದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯಿತು. ಬಿಆರ್​ಟಿಎಸ್ ರಸ್ತೆ ನಿರ್ಮಾಣದಲ್ಲಿ ಭ್ರಷ್ಟಾಚಾರವಾಗಿದೆ. ಈ ವಿಚಾರದಲ್ಲಿ ಶಾಸಕ ಅರವಿಂದ್​ ಬೆಲ್ಲದ್ ಅವರನ್ನೇ ನಾವು ನಂಬಬೇಕಿದೆ. ಬೆಲ್ಲದ್ ಅವರಿಗೆ ಬಿಜೆಪಿ ಭ್ರಷ್ಟಾಚಾರದ ಒಳಗಿನ ಗುಟ್ಟು ಗೊತ್ತಿದೆ. ಅವರಿಗಿಂತ ಬೇರೆ ಸಾಕ್ಷಿ ಬೇಕಾಗಿಲ್ಲ. ಬಿಎಸ್​ವೈ ಒಳ್ಳೆಯ ಸಿಎಂ‌ ಆಗಿದ್ರು, ಒಳ್ಳೆಯ ಕೆಲಸ ಮಾಡಿದ್ರು ಅವರನ್ಯಾಕೆ ಬದಲಾವಣೆ ಮಾಡಿದ್ರು? ಅವರು ಕಣ್ಣೀರು ಹಾಕಿ ಯಾಕೆ ರಾಜೀನಾಮೆ ನೀಡಿದ್ರು ಅನ್ನೋದರ ಉತ್ತರವನ್ನ ಬಿಜೆಪಿ ನೀಡಬೇಕು. ಭ್ರಷ್ಟಾಚಾರದಲ್ಲಿ ರಾಜ್ಯವೇ ನಂಬರ್ ಒನ್ ಆಗಿದೆ. ಬಸವಣ್ಣನ ನಾಡಿನಲ್ಲಿ ಸುಳ್ಳಿನ ಸರಮಾಲೆಯ ಪಕ್ಷ ಎಂಬ ಹೆಸರು ತೆಗೆದುಕೊಳ್ಳಬೇಡಿ.

Last Updated : Aug 29, 2021, 12:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.