ETV Bharat / city

ಸಾಲ ನೀಡುವುದಾಗಿ ಹೇಳಿ ಖಾತೆಯಿಂದ 1.50 ಲಕ್ಷ ರೂಪಾಯಿ ಎಗರಿಸಿ ವಂಚನೆ: ಹು-ಧಾರವಾಡದಲ್ಲಿ ಸೈಬರ್​ ಕ್ರೈಂ ಹೆಚ್ಚಳ

ಹುಬ್ಬಳ್ಳಿ-ಧಾರವಾಡದಲ್ಲಿ (Hubballi- dharawad)ಸೈಬರ್​ ಅಪರಾಧ ಪ್ರಕರಣಗಳು(cyber crime) ಹೆಚ್ಚಾಗುತ್ತಿವೆ. ಲೋನ್ ನೀಡುವುದಾಗಿ ವ್ಯಕ್ತಿಯೊಬ್ಬರಿಂದ 1.50 ಲಕ್ಷ ವರ್ಗಾಯಿಸಿಕೊಂಡು ಹುಬ್ಬಳ್ಳಿಯಲ್ಲಿ ವಂಚಿಸಿದರೆ, ಗೋಧಿ ಹಿಟ್ಟು ಖರೀದಿ ನೆಪದಲ್ಲಿ 59 ಸಾವಿರ ರೂಪಾಯಿ ಎಗರಿಸಿದ ಘಟನೆ ಧಾರವಾಡದಲ್ಲಿ ವರದಿಯಾಗಿದೆ.

cyber crime cases
ಸೈಬರ್​ ಅಪರಾಧ ಪ್ರಕರಣಗಳು
author img

By

Published : Nov 12, 2021, 1:18 PM IST

ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಸೈಬರ್​ ಅಪರಾಧ ಪ್ರಕರಣಗಳು (cyber crime)ಹೆಚ್ಚಾಗುತ್ತಿವೆ. ಅಪರಿಚಿತನೊಬ್ಬ ಲೋನ್ ನೀಡುವುದಾಗಿ ಕರೆ ಮಾಡಿ ವ್ಯಕ್ತಿಯೊಬ್ಬರ ಖಾತೆಯಿಂದ 1.50 ಲಕ್ಷ ವರ್ಗಾಯಿಸಿಕೊಂಡು ಹುಬ್ಬಳ್ಳಿಯಲ್ಲಿ ವಂಚಿಸಿದರೆ, ಗೋಧಿ ಹಿಟ್ಟು ಖರೀದಿ ನೆಪದಲ್ಲಿ 59 ಸಾವಿರ ರೂಪಾಯಿ ಎಗರಿಸಿದ ಘಟನೆ ಧಾರವಾಡದಲ್ಲಿ ವರದಿಯಾಗಿದೆ.

ಧಾರವಾಡದ ಜೈಭೀಮ ನಗರದ ಕೃಷ್ಣ ಕಟ್ಟಿಮನಿ ಎಂಬುವವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಲೋನ್​ ನೀಡುವುದಾಗಿ ತಿಳಿಸಿದ್ದಾನೆ. ವಿಳಾಸ ದಾಖಲೆ, ಬ್ಯಾಂಕ್​ ಖಾತೆ, ಎಟಿಎಂ ಮತ್ತಿತರ ದಾಖಲೆಗಳನ್ನು ಪಡೆದಿದ್ದಾನೆ. ಬಳಿಕ ವಾಟ್ಸ್ ಆ್ಯಪ್ ನಂಬರ್ ಪಡೆದು 2 ಲಿಂಕ್ ಕಳುಹಿಸಿ, ಅದರಲ್ಲಿ ಮಾಹಿತಿ ನೀಡುವಂತೆ ಸೂಚಿಸಿದ್ದ.

ಬಳಿಕ ನಿಮ್ಮ ಇಂಟರ್‌ನೆಟ್ ನಿಧಾನವಾಗಿದೆ. ನನ್ನ ನಂಬರ್‌ನಿಂದ ಅರ್ಜಿ ಸಲ್ಲಿಸುತ್ತೇನೆ ಎಂದು ಮತ್ತೊಂದು ಲಿಂಕ್ ಕಳುಹಿಸಿ, ನಂತರ ವಿವಿಧ ಶುಲ್ಕದ ನೆಪ ಹೇಳಿ ಹಂತ ಹಂತವಾಗಿ 1.50 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಕುರಿತು ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಧಿ ಹಿಟ್ಟು ಖರೀದಿ ನೆಪದಲ್ಲಿ 59 ಸಾವಿರ ದೋಖಾ

ಗೋಧಿ ಹಿಟ್ಟು ಖರೀದಿ ನೆಪದಲ್ಲಿ 59 ಸಾವಿರ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ನಾರಾಯಣಪುರದ ಶ್ರೀಶೈಲ ಬಲ್ಲೂರಗೆ ಅಪರಿಚಿತನೊಬ್ಬ ಕರೆ ಮಾಡಿದ್ದ. ತಾನು ಆರ್ಮಿ ಕಚೇರಿಯಿಂದ ಮಾತನಾಡುತ್ತಿದ್ದೇನೆ, ಎನ್‌ಎಸ್‌ಎಸ್ ಕ್ಯಾಂಪ್‌ಗೆ 22 ಚೀಲ ಗೋಧಿ ಹಿಟ್ಟು ಬೇಕಿದೆ ಎಂದು ತಿಳಿಸಿ ವಿಳಾಸವೊಂದನ್ನು ನೀಡಿದ್ದ.

ಬಳಿಕ ಮತ್ತೊಬ್ಬ ಕರೆ ಮಾಡಿ, ಗೋಧಿ ಹಿಟ್ಟಿನ ಹಣ ಪಾವತಿಸುತ್ತೇನೆಂದು ತಿಳಿಸಿ ಬಲ್ಲೂರ ಅವರ ಫೋನ್ ಪೇ ನಂಬರ್ ಪಡೆದಿದ್ದಾನೆ. ವಾಟ್ಸ್ ಆ್ಯಪ್‌ಗೆ ಕ್ಯೂಆರ್ ಕೋಡ್ ಕಳುಹಿಸಿ ಸ್ಕ್ಯಾನ್ ಮಾಡಿ ಯುಪಿಐ ಪಿನ್ ಹಾಕುವಂತೆ ತಿಳಿಸಿದ್ದಾನೆ. ಅವನ ಮಾತು ನಂಬಿ ಯುಪಿಐ ಪಿನ್​ ನೀಡಿದಾಗ 59,075 ರೂಪಾಯಿ ಹಣ ವಂಚನೆಗೀಡಾಗಿದ್ದು ಗೊತ್ತಾಗಿದೆ. ಈ ಬಗ್ಗೆ ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಕಳ್ಳತನ: 6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಕಿಮ್ಸ್‌ ವೈದ್ಯ ರಾಜಶೇಖರ ದ್ಯಾಬೇರಿ ಅವರು ಸೂರ್ಯನಗರದಲ್ಲಿ ನಿರ್ಮಿಸಿದ ತಮ್ಮ ಹೊಸಮನೆಯ ಗೃಹಪ್ರವೇಶದ ಕಾರ್ಯಕ್ರಮಕ್ಕೆ ಹೋದಾಗ ಕಿಮ್ಸ್‌ ಕ್ವಾಟ್ರರ್ಸ್‌ನಲ್ಲಿರುವ ಅವರ ಹಳೆಯ ಮನೆಯಲ್ಲಿ ಕಳ್ಳತನವಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, 6 ಲಕ್ಷ ಮೌಲ್ಯದ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಕಳ್ಳರು ದೋಚಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.