ಹುಬ್ಬಳ್ಳಿ: ಬೃಹತ್ ಕೋವಿಡ್ ಲಸಿಕಾಕರಣ ಅಭಿಯಾನದಲ್ಲಿ ಜಿಲ್ಲೆಯಲ್ಲಿ 85 ಸಾವಿರ ಕೋವಿಡ್ ಲಸಿಕೆ ನೀಡಿವ ಗುರಿ ಹೊಂದಲಾಗಿದ್ದು, ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಜನಸಾಗರವೇ ಹರಿದು ಬರುತ್ತಿದೆ.
ಬೆಳಗ್ಗೆಯಷ್ಟೇ ಜಿಲ್ಲಾಧಿಕಾರಿ ನಿತೇಶ ಪಾಟೀಲ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ಬೃಹತ್ ಲಸಿಕೆ ಅಭಿಯಾಕ್ಕೆ ಅಗತ್ಯ ಇರುವ ಲಸಿಕೆಗಳು ನಿನ್ನೆಯೇ ಜಿಲ್ಲಾಡಳಿತದ ಕೈ ಸೇರಿವೆ. 420ಕ್ಕೂ ಹೆಚ್ಚು ಲಸಿಕಾ ತಂಡಗಳನ್ನು ರಚಿಸಿ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಕಳುಹಿಸಿಕೊಡಲಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಕೋವಿಡ್ ಲಸಿಕಾ ಕೇಂದ್ರಗಳು ಇಲ್ಲದ ಗ್ರಾಮಗಳಿಗೆ ಕಿಮ್ಸ್ ಆಸ್ಪತ್ರೆಯಿಂದ 150 ಲಸಿಕಾ ತಂಡಗಳನ್ನು ರಚಿಸಿ ಲಸಿಕೆ ನೀಡಲು ಕಳಹಿಸಿಕೊಡಲಾಗಿದೆ. ಕೈಗಾರಿಕೆ ವಸಹಾತು ಸೇರಿದಂತೆ ಬೃಹತ್ ಕೈಗಾರಿಕೋದ್ಯಮಗಳು, ಸ್ಲಂಗಳು, ಸಮುದಾಯ ಭವನಗಳಲ್ಲಿ ಕೂಡ ಲಸಿಕಾಕರಣ ಕೈಗೊಳ್ಳಲಾಗುತ್ತಿದೆ.
ಗ್ರಾಮಗಳ ಶಾಲೆ ಹಾಗೂ ದೇವಸ್ಥಾನಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಆಧಾರ್ ಕಾರ್ಡ್ ತಗೆದುಕೊಂಡು ಬಂದು ಸಾರ್ವಜನಿಕರು ಲಸಿಕೆ ಪಡೆದುಕೊಳ್ಳಬಹುದಾಗಿದೆ. ಇನ್ನೂ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಿತ್ಯ 10 ಸಾವಿರಕ್ಕೂ ಅಧಿಕ ಲಸಿಕೆ ನೀಡಲಾಗುತ್ತಿದೆ. ಅಭಿಯಾನದ ನಂತರವೂ ದಿನವೂ 10 ಸಾವಿರ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇದನ್ನೂ ಓದಿ: ದೇಶದಲ್ಲಿ ಹೊಸದಾಗಿ 34,403 ಕೋವಿಡ್ ಕೇಸ್ ಪತ್ತೆ.. ಕೇರಳದಲ್ಲೇ 22,182 ಪ್ರಕರಣ ವರದಿ