ETV Bharat / city

ಧಾರವಾಡ ಜಿಲ್ಲಾಧಿಕಾರಿ ಸಮ್ಮುಖದಲ್ಲೇ 2 ಗುಂಪುಗಳ ನಡುವೆ ಘರ್ಷಣೆ

ಗ್ರಾಮ ವಾಸ್ತವ್ಯದ ಭಾಗವಾಗಿ ಜಿಲ್ಲಾಧಿಕಾರಿ ‌ನಿತೇಶ ಪಾಟೀಲ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ, ಕವಲಗೇರಿ ಗ್ರಾಮಸ್ಥರು ತಡೆದಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿಯೇ 2 ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

Conflict between 2 groups in front of dc at darawada
ಜಿಲ್ಲಾಧಿಕಾರಿ ಸಮ್ಮುಖದಲ್ಲಿ 2 ಗುಂಪುಗಳ ನಡುವೆ ಘರ್ಷಣೆ
author img

By

Published : Oct 16, 2021, 12:22 PM IST

Updated : Oct 16, 2021, 12:38 PM IST

ಧಾರವಾಡ: ಜಿಲ್ಲಾಧಿಕಾರಿ ಎದುರೇ 2 ಗುಂಪುಗಳ ನಡುವೆ ಘರ್ಷಣೆ ನಡೆದ ಘಟನೆ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮ ವಾಸ್ತವ್ಯದ ಭಾಗವಾಗಿ ಜಿಲ್ಲಾಧಿಕಾರಿ ‌ನಿತೇಶ ಪಾಟೀಲ ತಾಲೂಕಿನ ಕವಲಗೇರಿ, ಚಂದನಮಟ್ಟಿ, ಕನಕೂರ, ತಲವಾಯಿ ಗ್ರಾಮಗಳ ಮಾರ್ಗವಾಗಿ ವನಹಳ್ಳಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಾರು ತಡೆದು, ಮೊದಲು ಕೆಲವರು ಪ್ರತಿಭಟನೆ ನಡೆಸಿದರು.

2 ಗುಂಪುಗಳ ನಡುವೆ ಘರ್ಷಣೆ

ಈ ವೇಳೆ ಸರ್ಕಾರಿ ಶಾಲೆ ಜಾಗ ಅತಿಕ್ರಮಣ ಮಾಡಿದ್ದಾರೆಂದು ಕೆಲವರು ಆರೋಪಿಸಿದರು. ಇದು ನಮ್ಮ ಪಿತ್ರಾರ್ಜಿತ ಆಸ್ತಿ ಎಂದು ಮತ್ತೆ ಕೆಲವರು ವಾದಿಸಿದರು. ಕಾರು ತಡೆದ ಹಿನ್ನೆಲೆ ಕೆಳಗಿಳಿದು ಬಂದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಜಾಗ ವೀಕ್ಷಿಸಿದರು. ಶಾಲೆ ಜಾಗವನ್ನು ಡಿಸಿ ವೀಕ್ಷಿಸಿದ ಬಳಿಕ ಗುಂಪು ಘರ್ಷಣೆ ನಡೆದಿದೆ. ಗ್ರಾಮದ ಎರಡು ಗುಂಪುಗಳು ಕೈಕೈ ಮಿಲಾಯಿಸಿವೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ: ಒಂದು ಅಡಿಯಷ್ಟು ವಾಲಿದ ಪೊಲೀಸ್ ಕ್ವಾಟರ್ಸ್

ಸ್ಥಳದಲ್ಲಿ ಪೊಲೀಸರು ಇಲ್ಲದ ಹಿನ್ನೆಲೆ ಘರ್ಷಣೆ ತಾರಕಕ್ಕೇರಿದೆ. ಗುಂಪು ಘರ್ಷಣೆ ಶುರುವಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಸ್ಥಳದಿಂದ ತೆರಳಿದರು. ಕೊನೆಗೆ ಅಬಕಾರಿ ಸಿಬ್ಬಂದಿ ಗುಂಪನ್ನು ಚದುರಿಸಿದರು.

Last Updated : Oct 16, 2021, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.