ಹುಬ್ಬಳ್ಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರಸ್ತೆಯ ಬದಿ ಚಮ್ಮಾರಿಕೆ ಮಾಡುವವರಿಗೆ ಸರ್ಕಾರ ತಲಾ 5,000 ರೂ ಸಹಾಯಧನ ಘೋಷಿಸಿದ್ದು, ಈ ಸಹಾಯಧನ ಅರ್ಹ ಫಲಾನುಭವಿಗಳಿಗೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ದಿನಕ್ಕೆ 300-400 ರೂ ದುಡಿಯತ್ತಿದ್ದವರಿಗೆ ಈಗ ಕೆಲಸವಿಲ್ಲದಂತಾಗಿದೆ. ಇವರ ಕಷ್ಟಕ್ಕೆ ಸ್ಪಂದಿಸಿದ ಸರ್ಕಾರ 5,000 ರೂ ಸಹಾಯಧನ ನೀಡಿದೆ. ಈ ಹಣವನ್ನು ಪಡೆಯಲು ಅರ್ಹ ಫಲಾನುಭವಿಗಳು ಲಿಡ್ಕರ್ ನಿಗಮದಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಈ ರೀತಿ ಅರ್ಜಿ ಸಲ್ಲಿಸಿದರೂ ಕೂಡ ಫಲಾನುಭವಿಗಳು ಸಹಾಯಧನದಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪವಿದೆ.
ಹೀಗಾಗಿ ಕೂಡಲೇ ಅಧಿಕಾರಿಗಳು ಸಹಾಯಧನ ವಿತರಣೆಯಲ್ಲಿ ತಾರತಮ್ಯ ಮಾಡದೆ ಅರ್ಜಿ ಸಲ್ಲಿಸಿದ ಎಲ್ಲ ಫಲಾನುಭವಿಗಳಿಗೆ ಸಹಾಯಧನ ಒದಗಿಸಬೇಕು. ಸುಮಾರು ವರ್ಷಗಳಿಂದ ಬೀದಿಯಲ್ಲೇ ವ್ಯಾಪಾರ ಮಾಡುತ್ತಿರುವ ಚಮ್ಮಾರ ಕುಟುಂಬಗಳ ಬದುಕಿಗೆ ನೆರವಾಗಬೇಕೆಂದು ಅರ್ಹ ಫಲಾನಿಭವಿಗಳು ಮನವಿ ಮಾಡಿದ್ದಾರೆ.