ಧಾರವಾಡ: ಕೃಷಿ ವಿಶ್ವ ವಿದ್ಯಾಲಯ ಹೊಸ ಹೊಸ ಅನ್ವೇಷಣೆಗೆ ಹೆಸರುವಾಸಿಯಾಗಿದೆ. ನೂತನ ತಳಿ, ಬೆಳೆ ಇಲ್ಲಿ ಅಭಿವೃದ್ಧಿಯಾಗುತ್ತವೆ. ಇದೀಗ ಕಂದು ಬಣ್ಣದ ಹತ್ತಿ ಎಲ್ಲರ ಗಮನ ಸೆಳೆದಿದೆ. ಕಂದು ಬಣ್ಣದ ಹತ್ತಿಯಿಂದ ಬಟ್ಟೆ ತಯಾರಿಸಲಾಗುತ್ತಿದೆ.
ಹೌದು, ಧಾರವಾಡದ ಕೃವಿವಿಯಲ್ಲಿ ಸುಮಾರು 25 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿದ ಬೆಳೆಯೊಂದು ಇದೀಗ ಹೆಸರು ಮಾಡುತ್ತಿದೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಫಾರ್ಮ್ ನಲ್ಲಿ ಕಂದುಬಣ್ಣದ ಹತ್ತಿಯನ್ನು 1996ರಲ್ಲಿ ಅಭಿವೃದ್ಧಿಪಡಿಸಲಾಯಿತು. ನಿರಂತರವಾಗಿ ಸಂಶೋಧನೆಯಲ್ಲಿದ್ದ ಹತ್ತಿ ಇದೀಗ ವಾಣಿಜ್ಯ ಬಳಕೆಗೆ ಮುಕ್ತವಾಗಿದೆ.
ಕೃಷಿ ವಿವಿಯಲ್ಲಿರುವ ಕೈಮಗ್ಗದಲ್ಲಿ ಬಟ್ಟೆ, ಶಾಲು, ಕೌದಿ, ಸಣ್ಣ ಮಕ್ಕಳ ಉಡುಗೆ, ಸೀರೆ, ಸೇರಿದಂತೆ ವಿವಿಧ ಉಡುಗೆಗಳನ್ನು ತಯಾರಿಸಲಾಗುತ್ತಿದೆ. ಇಲ್ಲಿ ತಯಾರಿಸುವ ಬಟ್ಟೆಗಳಲ್ಲಿ ರಾಸಾಯನಿಕಗಳನ್ನು ಬಳಸುವುದಿಲ್ಲ ಎನ್ನುವುದು ಮತ್ತೊಂದು ವಿಶೇಷತೆಯಾಗಿದೆ. ರಾಸಾಯನಿಕ ಬಳಸದೇ ಆರೋಗ್ಯಕ್ಕೆ ಹಾನಿಯಾಗದಂತೆ ಬಟ್ಟೆಗಳನ್ನು ತಯಾರಿಸಲಾಗುತ್ತಿದೆ. ಇದೀಗ ಇಲ್ಲಿನ ಉತ್ಪನ್ನಗಳಿಗೆ ಬಹಳ ಬೇಡಿಕೆ ಹೆಚ್ಚಿರುವುದರಿಂದ ಪ್ರಮಾಣ ಕೂಡ ಹೆಚ್ಚಿಸಲಾಗಿದೆ. ಕಂದು ಬಣ್ಣದ ಹತ್ತಿಯಿಂದ ಬಟ್ಟೆ ತಯಾರಿಸಲಾಗುತ್ತಿದೆ.
ಇದನ್ನೂ ಓದಿ: ಹೋಟೆಲ್, ಬ್ಯಾಂಕ್ ಮೇಲೂ ಕಲ್ಲು ತೂರಿದ ಕಿಡಿಗೇಡಿಗಳು.. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ
ವಿವಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬಗೆಯ ವಸ್ತುಗಳು ತಯಾರಾಗಲಿ ಎನ್ನುವುದು ನಮ್ಮ ಆಶಯವಾಗಿದೆ.