ಹುಬ್ಬಳ್ಳಿ (ಧಾರವಾಡ): ಕ್ಯಾಸಿನೋ ಬ್ಯುಸಿನೆಸ್ ವಿಚಾರವಾಗಿ ಇಬ್ಬರು ಕಿರಿಕ್ ಮಾಡಿಕೊಂಡಿದ್ದು, ಪ್ರಕರಣ ತಿರುವು ಪಡೆದುಕೊಳ್ಳುತ್ತಿದೆ. ಯಾರು ಯಾರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸ್ ತನಿಖೆಯ ನಂತರ ಸತ್ಯ ತಿಳಿದುಬರಬೇಕಿದೆ.
ಗಿರೀಶ್ ಗದೀಗೆಪ್ಪಗೌಡ್ರು, ರಾಮತೀರ್ಥ ಇಬ್ಬರು ಹಲ್ಲೆ ಮಾಡಿಕೊಂಡವರು. ಇವರು ಗೋವಾದಲ್ಲಿ ಕ್ಯಾಸಿನೋ ವ್ಯವಹಾರ ಮಾಡಿದ್ದರಂತೆ. ಆದರೆ, ಕಳೆದ ಮೂರು ದಿನಗಳ ಹಿಂದೆ ನಗರದ ಸ್ವಾತಿ ಹೊಟೇಲ್ ಬಳಿ ಇಬ್ಬರೂ ಗಲಾಟೆ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡ ಗೀರಿಶ್ ಗದೀಗೆಪ್ಪಗೌಡ್ರು ಹೇಳುವ ಪ್ರಕಾರ, ನನಗೂ ಕ್ಯಾಸಿನೋಗೂ ಸಂಬಂಧ ಇಲ್ಲ. ನನ್ನ ರಾಜಕೀಯ ಏಳಿಗೆ ಸಹಿಸಲಾರದೆ ನನ್ನ ಕೆಲವರು ಮೇಲೆ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸಿದ್ದೇನೆ. ನಾನು ಯಾವುದೇ ಕಾರಣಕ್ಕೂ ಯಾರ ಮೇಲೂ ಸಹ ಹಲ್ಲೆ ಮಾಡಿಲ್ಲ. ನನ್ನನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ..
ಹಲ್ಲೆಗೊಳಗಾದ ಮತ್ತೋರ್ವ ರಾಮತೀರ್ಥ ಅವರು ಮೂರ್ನಾಲ್ಕು ಸ್ನೇಹಿತರಿಂದ ಹಣ ಪಡೆದು ಕ್ಯಾಸಿನೋ ಸಲುವಾಗಿ ಗಿರೀಶ ಗದೀಗೆಪ್ಪಗೌಡ್ರು ಕೈಯಲ್ಲಿ ಕೊಟ್ಟಿದ್ದಾರೆ. ಇದರಲ್ಲಿ ಒಬ್ಬರು ಹಣ ಮರಳಿ ಕೇಳಿದ್ದರಂತೆ. ಈ ವಿಷಯವನ್ನು ಗಿರೀಶ ಅವರಿಗೆ ರಾಮತೀರ್ಥ ಹೇಳಿದ್ದಾರೆ. ಅದಕ್ಕೆ ಗಿರೀಶ ಸ್ವಾತಿ ಹೊಟೇಲ್ಗೆ ಬನ್ನಿ ಎಂದು ಕರೆದು ಸುಮಾರು 15 ಬೆಂಬಲಿಗರೊಂದಿಗೆ ಬಂದು ಹಲ್ಲೆ ಮಾಡಿದ್ದಾರೆ. ಇದರಿಂದ ದೇಹದಲ್ಲಿ ಬಹಳ ಗಾಯಗಳಾಗಿವೆ ಎಂದು ರಾಮತೀರ್ಥ ಅವರು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನೂ ಗಿರೀಶ್ ಗದೀಗೆಪ್ಪಗೌಡ್ರು ಅವರು ಹಲ್ಲೆ ಮಾಡಿರೋದು ಮತ್ತು ಕ್ಯಾಸಿನೋ ಬಗ್ಗೆ ಮಾತನಾಡಿದ ಆಡಿಯೋ ಕೂಡ ನಮ್ಮಲ್ಲಿದೆ ಎಂದು ರಾಮತೀರ್ಥ ತಿಳಿಸಿದ್ದಾರೆ.
ಇದನ್ನೂ ಓದಿ: ಎಲೈತಿ ಕೊರೊನಾ, ನಿಮ್ಮಗೈತಿ ಕೊರೊನಾ.. ರಾಯಚೂರು ಪೊಲೀಸ್ರೊಂದಿಗೆ ವ್ಯಕ್ತಿ ಕಿರಿಕ್!
ಆದರೆ, ಯಾರು ಯಾರ ಮೇಲೆ ಹಲ್ಲೆ ಮಾಡಿದ್ದಾರೆನ್ನುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸ್ ತನಿಖೆ ಸಂಪೂರ್ಣಗೊಂಡ ಬಳಿಕ ಸತ್ಯ ಹೊರಬರಲಿದೆ.