ಸ್ವಚ್ಛತಾ ಕಾರ್ಯದಲ್ಲಿದ್ದ ಪೌರ ಕಾರ್ಮಿಕ ಎದೆನೋವಿನಿಂದ ಸಾವು.. - ಗುತ್ತಿಗೆ ಪೌರ ಕಾರ್ಮಿಕ
ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯೇ ಎದೆನೋವು ಕಾಣಿಸಿಕೊಂಡು ಪೌರ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ.
ಪೌರ ಕಾರ್ಮಿಕ ಸಾವು
ಹುಬ್ಬಳ್ಳಿ : ಕರ್ತವ್ಯದಲ್ಲಿದ್ದ ಪೌರ ಕಾರ್ಮಿಕನೊಬ್ಬ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕ ಅಶೋಕ್ ಎಂಬಾತ ಎದೆನೋವಿನಿಂದ ಮೃತಪಟ್ಟ ದುರ್ದೈವಿ.
ಈತ ಮೂಲತಃ ರೋಣ ನಿವಾಸಿ. ಇಂದು ಹುಬ್ಬಳ್ಳಿಯ ವಾರ್ಡ್ ನಂಬರ್ 28ರಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತನಾಗಿದ್ದಾಗ ಏಕಾಏಕಿ ಎದೆ ನೋವು ಕಾಣಿಸಿತ್ತು. ತಕ್ಷಣವೇ ಕಿಮ್ಸ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಶೋಕ್ ಮೃತಪಟ್ಟಿದ್ದಾರೆ.