ETV Bharat / city

ಹುಬ್ಬಳ್ಳಿ-ಚೆನ್ನೈ ವಿಶೇಷ ರೈಲಿಗೆ ಚಾಲನೆ; ಉದ್ಯೋಗಾವಕಾಶ, ಆರ್ಥಿಕ ವೃದ್ಧಿ ನಿರೀಕ್ಷೆ - ಪ್ರಹ್ಲಾದ್ ಜೋಶಿ ಹಾಗೂ ಸುರೇಶ್ ಅಂಗಡಿ

ವಾರದಲ್ಲಿ 2 ದಿನ ಸೇವೆ ನೀಡಲಿರುವ ಹುಬ್ಬಳ್ಳಿ - ಚೆನ್ನೈ ನಡುವಿನ ವಿಶೇಷ ರೈಲಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸುರೇಶ್ ಅಂಗಡಿ ಚಾಲನೆ ನೀಡಿದರು.

ಹುಬ್ಬಳ್ಳಿ - ಚೆನ್ನೈ ವಿಶೇಷ ರೈಲಿಗೆ ಕೇಂದ್ರ ಸಚಿವರಿಂದ ಚಾಲನೆ
author img

By

Published : Sep 14, 2019, 10:23 PM IST

ಹುಬ್ಬಳ್ಳಿ: ಹುಬ್ಬಳ್ಳಿ - ಚೆನ್ನೈ ಮಧ್ಯೆ ವಾರದಲ್ಲಿ ಎರಡು ದಿನ ಸೇವೆ ನೀಡಲಿರುವ ವಿಶೇಷ ರೈಲಿಗೆ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಇದಕ್ಕೂ ಮೊದಲು ಉತ್ತರ ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಅಣ್ಣಿಗೇರಿ - ಹುಲಕೋಟಿ ನಡುವಿನ ಜೋಡಿ ರೈಲು ಮಾರ್ಗದ ಸಮರ್ಪಣೆ ಸಮಾರಂಭವನ್ನು ನಡೆಸಲಾಯಿತು.

ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಸುರೇಶ್​ ಅಂಗಡಿ, ಹುಬ್ಬಳ್ಳಿ-ಚೆನ್ನೈ (17313) ಮಧ್ಯೆ ಸಂಚರಿಸಲಿರುವ ವಿಶೇಷ ರೈಲು ಪ್ರತಿ ಮಂಗಳವಾರ ಹಾಗೂ ಶುಕ್ರವಾರ, ಹುಬ್ಬಳ್ಳಿ ನಿಲ್ದಾಣದಿಂದ ಬಿಟ್ಟರೆ, ಪ್ರತಿ ಬುಧವಾರ ಹಾಗೂ ಶನಿವಾರ ಚೆನ್ನೈನಿಂದ ಸೇವೆ ಒದಗಿಸಲಿದೆ. ಈ ಮೂಲಕ ಚೆನ್ನೈಗೆ ತೆರಳಲು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.‌ ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡಿಸುವ ಜೊತೆಗೆ ನಿಲ್ದಾಣಕ್ಕೆ ಶ್ರೀ ಸಿದ್ದಾರೋಢ ಸ್ವಾಮೀಜಿಯವರ ಹೆಸರಿಡುವ ಚಿಂತನೆ ಇದ್ದು, ರಾಜ್ಯ ಸರ್ಕಾರ ಪ್ರಸ್ತಾವನೆ ಕಳಿಸಿದರೆ ಕೂಡಲೇ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸಿದ್ದಾರೋಢರ ಹೆಸರಿಡಲಾಗುವುದು ಎಂದು ಹೇಳಿದರು.

ಹುಬ್ಬಳ್ಳಿ - ಚೆನ್ನೈ ವಿಶೇಷ ರೈಲಿಗೆ ಕೇಂದ್ರ ಸಚಿವರಿಂದ ಚಾಲನೆ

ಹುಬ್ಬಳ್ಳಿ -ಚೆನ್ನೈ ಮಧ್ಯೆ ಸಂಚರಿಸುವ ವಿಶೇಷ ರೈಲಿನಿಂದಾಗಿ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮೂರು ರಾಜ್ಯದ ಜನರಿಗೆ ಅನುಕೂಲವಾಗಲಿದ್ದು, ಆರ್ಥಿಕತೆ ಅಭಿವೃದ್ಧಿಯೊಂದಿಗೆ ಯುವಕರಿಗೆ ಉದ್ಯೋಗ ಅವಕಾಶಕ್ಕೂ ಸಹಾಯವಾಗಲಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣವನ್ನು ಇನ್ನೆರಡು ಫ್ಲಾಟ್ ಫಾರ್ಮ್​ನ ಮೇಲ್ದರ್ಜೆಗೆ ಏರಿಸಲಾಗುವುದು. ಈ ದಿಸೆಯಲ್ಲಿ ಉತ್ತರ ಕರ್ನಾಟಕದ ಭಾಗದ ಯುವಕರು ರೈಲ್ವೇ ಇಲಾಖೆಯಲ್ಲಿರುವ ಉದ್ಯೋಗ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ರಾಜ್ಯದ ಬಹುತೇಕ ರೇಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ರೈಲ್ವೆ ಇಲಾಖೆಯನ್ನು ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2030 ರವರೆಗೆ 50 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ತಿರ್ಮಾನಿಸಿದೆ. ಈಗಾಗಲೇ ಹುಬ್ಬಳ್ಳಿ-ಚಿಕ್ಕಜಾಜೂರು ರೈಲ್ವೆ ಹಳ್ಳಿ ಡಬ್ಲಿಂಗ್ ಕಾಮಗಾರಿ ನಡೆಯುತ್ತಿದೆ, ಆದರೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು. ಇನ್ನೂ ಹುಬ್ಬಳ್ಳಿ-ಚಿತ್ರದುರ್ಗದ ನಡುವೆ ರೈಲ್ವೆ ವಿಸ್ತರಣೆಗೆ ಭೂಮಿ ವಶಪಡಿಯುವ ಕೆಲಸ ವಿಳಂಬವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭೂಮಿಯನ್ನು ಕೂಡಲೇ ವಶಕ್ಕೆ ಪಡೆದರೆ ಕಾಮಗಾರಿಗೆ ಅನುಕೂಲವಾಗಲಿದೆ.ಇನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಆಟೋ ಚಾಲಕರು ಪ್ರಯಾಣಿಕರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಜೊತೆಗೆ ರೈಲ್ವೆ ಅಧಿಕಾರಿಗಳು ನಿಲ್ದಾಣದ ಸ್ವಚ್ಚತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಿಎಂ ಉದಾಸಿ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್​, ಲೋಕಸಭಾ ಸದಸ್ಯರಾದ ಶಿವಕುಮಾರ್ ಉದಾಸಿ ಸೇರಿದಂತೆ ಮುಂತಾದವರು ಇದ್ದರು.

Intro:ಹುಬ್ಬಳಿBody:ಚೆನ್ನೈ - ಹುಬ್ಬಳ್ಳಿ ವಿಶೇಷ ರೈಲಿಗೆ ಕೇಂದ್ರ ರೇಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಹಾಗೂ ಕೇಂದ್ರ ಸಚಿವ ಜೋಶೀ ಚಾಲನೆ.

ಹುಬ್ಬಳ್ಳಿ:-ಹುಬ್ಬಳ್ಳಿ- ಚೆನ್ನೈ (17313) ಮಧ್ಯೆ ವಾರದಲ್ಲಿ ಎರಡು ದಿನ ಸೇವೆ ನೀಡಲಿರುವ ವಿಶೇಷ ರೈಲಿಗೆ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಗಣಿಹ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕೇಂದ್ರ ರೇಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸವು ಮೂಲಕ ಚಾಲನೆ ನೀಡಿದರು. ಇದಕ್ಕೂ ಮೊದಲು ಉತ್ತರ ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆ ಯಾಗಿದ್ದ ಅಣ್ಣಿಗೇರಿ - ಹುಲಕೋಟಿ ನಡುವಿನ ಜೋಡಿ ರೈಲು ಮಾರ್ಗದ ಸಮರ್ಪಣೆ ಸಮಾರಂಭವನ್ನು ನಡೆಸಲಾಯಿತು. ನಂತರ ಮಾದ್ಯಮದವರ ಜೊತೆ ಮಾತನಾಡಿದ ಅವರು ಹುಬ್ಬಳ್ಳಿ-ಚೆನ್ನೈ (17313) ಮಧ್ಯೆ ಸಂಚರಿಸಲಿರುವ ವಿಶೇಷ ರೈಲು ಪ್ರತಿ ಮಂಗಳವಾರ, ಶುಕ್ರವಾರ ಹುಬ್ಬಳ್ಳಿ ನಿಲ್ದಾಣದಿಂದ ಬಿಟ್ಟರೆ, ಪ್ರತಿ ಬುಧವಾರ, ಶನಿವಾರ ಚೆನ್ನೈ ನಿಂದ ಸೇವೆ ಒದಗಿಸಲಿದೆ. ಈ ಮೂಲಕ ಚೆನ್ನೈ ಗೆ ತೆರಳಲು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.‌ ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡಿಸುವ ಜೊತೆಗೆ ನಿಲ್ದಾಣಕ್ಕೆ ಶ್ರೀ ಸಿದ್ದಾರೋಢ ಸ್ವಾಮೀಜಿಯವರ ಹೆಸರಿಡುವ ಚಿಂತನೆ ಇದ್ದು, ರಾಜ್ಯ ಸರ್ಕಾರ ಪ್ರಸ್ತಾವನೆ ಕಳಿಸಿದರೆ ಕೂಡಲೇ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸಿದ್ದಾರೋಢರ ಹೆಸರಿಡಲಾಗುವುದು ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು. ಮಾತನಾಡಿದ ಅವರು, ಹುಬ್ಬಳ್ಳಿ -ಚೆನ್ನೈ ಮಧ್ಯೆ ಸಂಚರಿಸಲು ವಿಶೇಷ ರೈಲಿನಿಂದಾಗಿ ಮಹಾರಾಷ್ಟ್ರ ಗೋವಾ ಕರ್ನಾಟಕ ಮೂರು ರಾಜ್ಯದ ಜನರಿಗೆ ಅನುಕೂಲವಾಗಲಿದ್ದು ಆರ್ಥಿಕತೆ ಅಭಿವೃದ್ಧಿಯೊಂದಿಗೆ ಯುವಕರಿಗೆ ಉದ್ಯೋಗ ಅವಕಾಶಕ್ಕೂ ಸಹಾಯವಾಗಲಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣವನ್ನು ಇನ್ನೆರಡು ಫ್ಲಾಟ್ ಫಾರ್ಮ್ ನ ಮೇಲ್ದರ್ಜೆಗೆ ಏರಿಸಲಾಗುವುದು. ಈ ದಿಸೆಯಲ್ಲಿ ಉತ್ತರ ಕರ್ನಾಟಕದ ಭಾಗದ ಯುವಕರು ರೈಲ್ವೇ ಇಲಾಖೆಯಲ್ಲಿರುವ ಉದ್ಯೋಗ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಹಾಗೂ ರಾಜ್ಯದ ಬಹುತೇಕ ರೇಲ್ವೆ ನಿಲ್ದಾಣಗಳಲ್ಲಿ ಪ್ಲ್ಯಾಸ್ಟಿಕ್ ಮುಕ್ತ ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಿಎಮ್ ಉದಾಸಿ, ಜೆಡಿಎಸ್ ಮುಖಂಡ ಬಸವರಾಜ ಹೋರಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ,ಲೋಕಸಭಾ ಸದಸ್ಯರಾದ ಶಿವಕುಮಾರ್ ಉದಾಸಿ ಸೇರಿದಂತೆ ಮುಂತಾದವರು ಇದ್ದರು...

ಬೈಟ್:- ಕೇಂದ್ರ ರೇಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ.

___________________________

ಹುಬ್ಬಳ್ಳಿ: ಸ್ಟ್ರಿಂಜರ್ ಯಲ್ಲಪ್ ಕುಂದಗೋಳ

Conclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.