ಹುಬ್ಬಳ್ಳಿ: ಚಿಗರಿ ಬಸ್ ಹಾಗೂ ಕಾರಿನ ನಡುವೆ ಅಪಘಾತವಾದ ಘಟನೆ ನಗರದ ಸನಾ ಕಾಲೇಜು ಬಳಿಯ ಬ್ರಿಡ್ಜ್ ಹತ್ತಿರದ ಬಿಆರ್ಟಿಎಸ್ ಕಾರಿಡಾರ್ನಲ್ಲಿ ನಡೆದಿದೆ.
ಬಿಆರ್ಟಿಎಸ್ ರಸ್ತೆ ಕೇವಲ ಚಿಗರಿ ಹಾಗೂ ಆಂಬುಲೆನ್ಸ್ ಸಂಚಾರಕ್ಕೆ ಮುಕ್ತವಾಗಿದೆ. ಆದ್ರೆ ಇದೆಲ್ಲಾ ಗೊತ್ತಿದ್ರು ಕೂಡಾ ರಸ್ತೆಯಲ್ಲಿ ಬಂದ ಕಾರು, ಚಿಗರಿ ಬಸ್ಗೆ ಉಜ್ಜಿಕೊಂಡು ಹೋಗಿದೆ. ಸ್ವಲ್ಪದರಲ್ಲೇ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದೆ.
ಬಿಆರ್ಟಿಎಸ್ ಕಾರಿಡಾರ್ನಲ್ಲಿ ಬೇರೆ ವಾಹನ ಓಡಿಸಬಾರದು ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಇಂತಹ ಘಟನೆ ನಡೆಯುತ್ತಿರುವುದಕ್ಕೆ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.