ಹುಬ್ಬಳ್ಳಿ: ಅಡ್ಡ ದಾರಿಯಲ್ಲಿ ನಡೆಯಬೇಡಿ, ಸರಿ ದಾರಿಯಲ್ಲಿ ನಡೆಯಿರಿ ಎಂದು ಬ್ಯಾರಿಕೇಡ್ ಹಾಗೂ ಡಿವೈಡರ್ ಹಾಕಲಾಗಿರುತ್ತೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೊಬ್ಬ ಯಜಮಾನ ಅಕ್ರಮವಾಗಿ ಬ್ಯಾರಿಕೇಡ್ ದಾಟಲು ಹೋಗಿ ಸಿಲುಕಿ ಪರದಾಡಿದ ಘಟನೆ ಚೆನ್ನಮ್ಮ ಸರ್ಕಲ್ ಬಳಿಯ ಬಿಆರ್ಟಿಎಸ್ ಬಸ್ ಸ್ಟಾಪ್ನಲ್ಲಿ ನಡೆದಿದೆ.
ಬೈಕ್ ಸವಾರ ಬ್ಯಾರಿಕೇಡ್ ಮೂಲಕ ಹಾದು ಹೋಗುವ ಹರಸಾಹಸಕ್ಕೆ ಮುಂದಾಗಿದ್ದಾನೆ. ಆದರೆ ಅಲ್ಲಿ ಪಾರಾಗಲು ಆಗದೆ ಮಧ್ಯೆದಲ್ಲಿಯೇ ಸಿಲುಕಿಕೊಂಡಿದ್ದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಬಿ.ಆರ್.ಟಿ.ಎಸ್. ಬಸ್ಗಾಗಿ ಬ್ಯಾರಿಕೇಡ್ ಹಾಕಲಾಗಿದೆ. ಆದರೆ ಇಂದು ಭಾರತ್ ಬಂದ್ ವೇಳೆಯಲ್ಲಿ ಟ್ರಾಫಿಕ್ ಕೂಡ ಕಡಿಮೆ ಇದೆಯೆಂದು ಈ ಸಾಹಸಕ್ಕೆ ಕೈ ಹಾಕಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ. ಕೂಡಲೇ ಸ್ಥಳೀಯರು ವ್ಯಕ್ತಿಯನ್ನು ಕೆಳಗಿಳಿಸಿ ಬೈಕ್ ಹೊರಗಡೆ ತೆಗೆದಿದ್ದಾರೆ. ಬಳಿಕ ಬೈಕ್ ಸವಾರ ನಿಟ್ಟುಸಿರು ಬಿಟ್ಟಿದ್ದಾನೆ.