ಕೊಡಗು/ಹುಬ್ಬಳ್ಳಿ : ಮಳೆಗಾಲ ಆರಂಭಕ್ಕೂ ಮೊದಲೇ ಕೊಡಗು ಮತ್ತು ಹುಬ್ಬಳ್ಳಿಯಲ್ಲಿ ಮಳೆಯಾಗಿದೆ. ಕೊಡಗಿನಲ್ಲಿ ಗುಡುಗು ಸಹಿತ ಮಳೆ ಬಂದರೆ, ಹುಬ್ಬಳ್ಳಿಯಲ್ಲಿ ತುಂತುರು ಮಳೆಯಾಗಿದೆ.
ಮಡಿಕೇರಿ, ಸುಂಟಿಕೊಪ್ಪ, ನಾಪೋಕ್ಲು ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿದೆ. ಕೊಡಗಿನಲ್ಲಿ ಮೊದಲ ಮಳೆಯ ಸಿಂಜನವಾಗಿದ್ದು, ಬಿಸಿಲ ಬೇಗೆಯಿಂದ ಬೇಸತ್ತಿದ್ದ ಜನರಿಗೆ ವರುಣ ತಪ್ಪೆರದಿದ್ದಾನೆ.
ಅಕಾಲಿಕ ಮಳೆಯಿಂದ ಪ್ರವಾಸಿಗರು, ವಾಹನ ಸವಾರರು ಕಿರಿ ಕಿರಿ ಅನುಭವಿಸಿದ್ದಾರೆ. ಮಳೆಯಿಂದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನೂ ಮಳೆಗಾಲಕ್ಕೂ ಮೊದಲೇ ಆರಂಭವಾದ ಮಳೆಯಿಂದ ಗುಡ್ಡ ಕುಸಿತ, ಜಲಪ್ರಳಯದಂತಹ ಭಯವೂ ಜನರನ್ನು ಕಾಡುತ್ತಿದೆ.
ಹುಬ್ಬಳ್ಳಿಯಲ್ಲಿ ತುಂತುರು ಮಳೆ : ತಾಪವನ್ನು ತಗ್ಗಿಸಿದ ವರುಣ
ಅಬ್ಬಾ ಏನು ಬಿಸಿಲು ಎಂದುಕೊಂಡು ಓಡಾಡುತ್ತಿದ್ದ ಹುಬ್ಬಳ್ಳಿ ಜನರಿಗೆ ಮಧ್ಯಾಹ್ನದ ವೇಳೆ ಮಳೆರಾಯ ತಂಪೆರೆದಿದ್ದು, ಲ್ಯಾಮಿಂಗ್ಟನ್ ರಸ್ತೆ ಸೇರಿದಂತೆ ಕೇಶ್ವಾಪುರದ ಬಹುತೇಕ ಕಡೆಗಳಲ್ಲಿ ತುಂತುರು ಮಳೆಯಾಗಿದೆ.
ಏಕಾಏಕಿ ಮೋಡ ಕವಿದ ವಾತಾವರಣದಿಂದ ಸ್ವಲ್ಪ ಪ್ರಮಾಣದ ಮಳೆಯಾಗಿದೆ. ವಾಣಿಜ್ಯನಗರಿ ಜನರು ಬಿಸಿಲಿನಿಂದ ಸುಧಾರಿಸಿಕೊಳ್ಳುವಂತಾಯಿತು.
ಇದನ್ನೂ ಓದಿ: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ : ಇಂಜಿನಿಯರಿಂಗ್ ಪದವೀಧರರು, ಮಂಗಳಮುಖಿಯರಿಗೂ ಅವಕಾಶ!