ETV Bharat / city

ಧಾರವಾಡ ತತ್ವಜ್ಞಾನದ ಭಂಡಾರ, ಇಡೀ ಲೋಕಕ್ಕೆ ಬೆಳಕು ಕೊಡುವ ಶಕ್ತಿ ಇಲ್ಲಿದೆ: ಸಿಎಂ ಬೊಮ್ಮಾಯಿ - ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಧಾರವಾಡದಲ್ಲಿ ಬಸವೇಶ್ವರ ಕಂಚಿನ ಮೂರ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಭಾನುವಾರ ಉದ್ಘಾಟಿಸಿದರು.

Basaveshwara Bronze Statue Opening Ceremony in Dharwad
ಧಾರವಾಡ ತತ್ವಜ್ಞಾನದ ಭಂಡಾರ ಇಡೀ ಲೋಕಕ್ಕೆ ಬೆಳಕು ಕೊಡುವ ಶಕ್ತಿ ಇಲ್ಲಿದೆ
author img

By

Published : May 15, 2022, 9:45 PM IST

ಧಾರವಾಡ: ಈ ಊರಿಗೆ ಒಂದು ಪರಂಪರೆ ಇದೆ. ಕಲೆ, ಸಾಹಿತ್ಯ, ವಿದ್ಯೆ, ಸಂಗೀತ ಎಲ್ಲವನ್ನೂ ಈ ನೆಲ ಹೊಂದಿದೆ. ಸಂಗೀತ ಮತ್ತು ಸಾಹಿತ್ಯ ಒಂದೇ ಕಡೆ ಇರೋದಿಲ್ಲ ಅದು ಧಾರವಾಡದಲ್ಲಿ ಮಾತ್ರ ಇದೆ.‌ ಇಲ್ಲಿನಿಂದಲೇ ಅನೇಕ ಸಾಹಿತಿ, ಸಂಗೀತಗಾರರು ಪ್ರಸಿದ್ಧರಾಗಿದ್ದಾರೆ. ಅದು ಧಾರವಾಡದ ಮಣ್ಣಿನ ಗುಣಧರ್ಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಧಾರವಾಡದಲ್ಲಿ ಬಸವೇಶ್ವರ ಕಂಚಿನ ಮೂರ್ತಿ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ವಿಚಾರಗಳು ಸರ್ವಕಾಲಕ್ಕೂ ಸತ್ಯ. ಬಸವ ಪರಂಪರೆಯಲ್ಲಿದ್ದವರು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಚನ್ನಬಸವೇಶ್ವರರು ಇತರ ವಚನಕಾರರಿಗಿಂತ ಒಂದು ಹೆಜ್ಜೆ ಮುಂದೆ ಇದ್ದರು, ಕಟು ಸತ್ಯಗಳನ್ನು ಚನ್ನಬಸವಣ್ಣ ಹೇಳಿದ್ದಾರೆ. ಬಸವಣ್ಣ ಇನ್ನೂ ಪ್ರಸ್ತುತ ಅಂತಾ ನಾವು ಹೇಳುತ್ತೇವೆ. ಬಸವಣ್ಣ ಅಸ್ಪೃಶ್ಯತೆ, ಅಸಮಾನತೆ, ಮೇಲು ಕೀಳು, ಲಿಂಗಬೇಧ ವಿರುದ್ಧ ಹೋರಾಡಿದ್ದರು. ಅವರು ಪ್ರಸ್ತುತ ಅಂತಾದ್ರೆ ಇವೆಲ್ಲವೂ ಇನ್ನೂ ಇವೆ ಅಂತಾ ಅರ್ಥ. 900 ವರ್ಷವಾದರೂ ಅಸಮಾನತೆ, ಮೂಢನಂಬಿಕೆ ಇನ್ನೂ ಇದೆ ಎಂದು ಬೇಸರ ವ್ಯಕ್ತಪಡಿಸಿದ್ರು.

ಧಾರವಾಡ ತತ್ವಜ್ಞಾನದ ಭಂಡಾರ ಇಡೀ ಲೋಕಕ್ಕೆ ಬೆಳಕು ಕೊಡುವ ಶಕ್ತಿ ಇಲ್ಲಿದೆ

ಕಾಮನ್​ ಮ್ಯಾನ್​ ಸಿಎಂ: ಬೊಮ್ಮಾಯಿಯವರು ಬಂದ ಮೇಲೆ ಸರಳ ಸಿಎಂ ಆಗಿದ್ದಾರೆ.‌ ಧಾರವಾಡಕ್ಕೆ ಬರೋವಾಗ ದಾರಿ ಮಧ್ಯೆ ಓರ್ವ ನಿಲ್ಲಿಸಿ ಕೈ ಕುಲುಕಿ ಹೋದ. ಇದೆಲ್ಲ ಮೊದಲೆಲ್ಲ ಸಾಧ್ಯ ಆಗತಾ ಇರಲಿಲ್ಲ. ಇಂತಹ ಕಾಮನ್ ಮ್ಯಾನ್ ಸಿಎಂ ಆಗಿ ಹೊರಹೊಮ್ಮುತ್ತಿದ್ದಾರೆ. ಇವರು ಎಸ್.ಆರ್. ಬೊಮ್ಮಾಯಿ ಸುಪುತ್ರ, ಅವರ ಸ್ನೇಹ ಬಳಗ ದೊಡ್ಡದಿದೆ. ಆದ್ರೆ ಎಲ್ಲಿಯೂ ಸಿಎಂ ತರಹದ ವರ್ತನೆ ತೋರಿಲ್ಲ, ಆ ರೀತಿಯ ಕಾಮನ್ ಮ್ಯಾನ್ ಸಿಎಂ ಅವರಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಬೊಮ್ಮಾಯಿ ಅವರನ್ನು ಹೊಗಳಿದರು.

ಇದನ್ನೂ ಓದಿ:ರಾಜಕೀಯ ಸಲಹಾ ಸಮಿತಿ ರಚನೆ, ಇದೇ ವರ್ಷ 'ಭಾರತ್ ಜೋಡೋ' ಪಾದಯಾತ್ರೆ : ಸೋನಿಯಾ ಗಾಂಧಿ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.