ETV Bharat / city

ಇಂತವರನ್ನೆಲ್ಲ ಹಿಂಗೇ ಮಾಡ್ಬೇಕು, ಎನ್‌ಕೌಂಟರ್‌ ಸರಿ, ತಪ್ಪೇನಲ್ಲ.. ಮಾಜಿ ಸಚಿವ ಹೊರಟ್ಟಿ - ಉಪ ಚುನಾವಣಾ ಸಮೀಕ್ಷೆ

ಎನ್​ಕೌಂಟರ್ ಮಾಡಿದ್ದು ಒಳ್ಳೆಯ ವಿಚಾರ. ಹೆಣ್ಣು ಮಕ್ಕಳ ಮೇಲೆ ಈ ರೀತಿ ನಡೆದುಕೊಂಡವರನ್ನು ಗಲ್ಲಿಗೇರಿಸಲೇಬೇಕು. ನ್ಯಾಯಾಲಯಗಳು ಇಂತವರನ್ನು ಬಹಳ ದಿನ ಇಟ್ಟುಕೊಳ್ಳಬಾರದು.

ಧಾರವಾಡದಲ್ಲಿ  ಬಸವರಾಜ ಹೊರಟ್ಟಿ ಪ್ರತಿಕ್ರಿಯೆ
ಧಾರವಾಡದಲ್ಲಿ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ
author img

By

Published : Dec 6, 2019, 2:14 PM IST

ಧಾರವಾಡ: ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುವ ಸುಳಿವನ್ನು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಬಿಟ್ಟುಕೊಟ್ಟಿದ್ದಾರೆ.‌ ಸರ್ಕಾರ ಬೀಳಿಸುವ ಮನಸ್ಸು ನಮಗಿಲ್ಲ. ದೇವೇಗೌಡರು ಕೂಡ ಅದನ್ನೇ ಹೇಳಿದ್ದಾರೆ ಎಂದು ಬೆಂಬಲ‌ ನೀಡುವ ಸುಳಿವು ನೀಡಿದ್ದಾರೆ.

ಮಾಜಿ ಸಚಿವ ಬಸವರಾಜ ಹೊರಟ್ಟಿ..

ಧಾರವಾಡದಲ್ಲಿ ಉಪ ಚುನಾವಣಾ ಸಮೀಕ್ಷೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈವರೆಗೆ ನಡೆಸಿದ ಸಮೀಕ್ಷೆಗಳು ಯಾವುದೂ ಸರಿಯಾಗಿಲ್ಲ. ಹಲವಾರು ಜನ ಬೇರೆ ಬೇರೆ ರೀತಿ ಸಮೀಕ್ಷೆ ನಡೆಸಿದ್ದಾರೆ. ಎಲ್ಲರದೂ ಒಂದೇ ರೀತಿಯಾಗಿ ಬಂದಿಲ್ಲ ಎಂದರು. ಜನರ ಭಾವನೆಗಳು ಯಾರಿಗೂ ಗೊತ್ತಾಗುವುದಿಲ್ಲ. ಆದ್ದರಿಂದ ಸಮೀಕ್ಷೆಗಳನ್ನು ಸಂಪೂರ್ಣವಾಗಿ ನಂಬುವುದಿಲ್ಲ, ಸಮೀಕ್ಷೆಗಳ ಪ್ರಕಾರ ಫಲಿತಾಂಶ ಬರುವುದಿಲ್ಲ ಎನ್ನುವುದು ನನ್ನ ನಂಬಿಕೆ ಎಂದು ಹೇಳಿದ್ದಾರೆ.

7 ಸೀಟ್ ಬಂದರೆ ಮಾತ್ರ ರಾಜ್ಯ ಬಿಜೆಪಿ ಸರ್ಕಾರ ಉಳಿಯುತ್ತೆ. ಇಲ್ಲವಾದ್ರೆ ಬೇರೆ ಡೆವೆಲಪ್‌ಮೆಂಟ್ ನಡೆಯತ್ತೆ. ಜನರಿಗೆ ಸರ್ಕಾರ ಬೀಳಬಾರದು ಎಂಬ ಆಸೆ ಇದೆ. ಆ ಹಿನ್ನೆಲೆ ಏನಾದ್ರೂ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಸರ್ಕಾರ ಬೀಳಬಾರದು ಎನ್ನುವ ಮಾತನ್ನೂ ಕೂಡ ದೇವೇಗೌಡರು ನಿನ್ನೆ ಹೇಳಿದ್ದಾರೆ. ಸಿದ್ದರಾಮಯ್ಯನವರ ಜೊತೆ ಸೇರಿ ಕಾಂಗ್ರೆಸ್​ಗೆ ಕೈ ಜೋಡಿಸುವ ಮನಸ್ಸು ದೇವೇಗೌಡರಿಗೆ ಇಲ್ಲ. ಫಲಿತಾಂಶ ಬಂದ ನಂತರ ಎಲ್ಲಾ ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ.

ಅತ್ಯಾಚಾರ ಆರೋಪಿಗಳ ಎನ್​ಕೌಂಟರ್ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಎನ್​ಕೌಂಟರ್ ಮಾಡಿದ್ದು ಒಳ್ಳೆಯ ವಿಚಾರ. ಹೆಣ್ಣು ಮಕ್ಕಳ ಮೇಲೆ ಈ ರೀತಿ ನಡೆದುಕೊಂಡವರನ್ನು ಗಲ್ಲಿಗೇರಿಸಲೇಬೇಕು. ನ್ಯಾಯಾಲಯಗಳು ಇಂತವರನ್ನು ಬಹಳ ದಿನ ಇಟ್ಟುಕೊಳ್ಳಬಾರದು. ಎನ್​ಕೌಂಟರ್ ಮಾಡಿದ್ದು ಸರಿಯಾದ ಕ್ರಮ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.

Intro:ಧಾರವಾಡ: ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುವ ಸುಳಿವನ್ನು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಬಿಟ್ಟುಕೊಟ್ಟಿದ್ದಾರೆ.‌ ಸರ್ಕಾರ ಬೀಳಿಸುವ ಮನಸ್ಸು ನಮಗಿಲ್ಲ, ದೇವೆಗೌಡರು ಕೂಡಾ ಅದನ್ನೆ ಹೇಳಿದ್ದಾರೆ ಎಂದು ಬೆಂಬಲ‌ ನೀಡುವ ಸುಳಿವು ನೀಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣಾ ಸಮೀಕ್ಷೆ ವಿಚಾರಕ್ಕೆ ಸಹ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿವರೆಗೆ ನಡೆಸಿದ ಸಮೀಕ್ಷೆಗಳು ಇದುವರೆಗೂ ಸರಿಯಾಗಿಲ್ಲ, ಹಲವಾರು ಜನ ಬೇರೆ ಬೇರೆ ರೀತಿ ಸಮೀಕ್ಷೆ ನಡೆಸಿದ್ದಾರೆ, ಎಲ್ಲರದೂ ಒಂದೆ ರೀತಿಯಾಗಿ ಬಂದಿಲ್ಲ ಎಂದರು.

ಜನರ ಭಾವನೆಗಳು ಯಾರಿಗೂ ಗೊತ್ತಾಗುವುದಿಲ್ಲ ಆದ್ದರಿಂದ ಸಮೀಕ್ಷೆಗಳನ್ನು ಸಂಪೂರ್ಣವಾಗಿ ನಂಬುವದಿಲ್ಲ, ಸಮೀಕ್ಷೆಗಳ ಪ್ರಕಾರ ಫಲಿತಾಂಶ ಬರುವುದಿಲ್ಲ ಎನ್ನುವದು ನನ್ನ ನಂಬಿಕೆ ಎಂದು ಹೇಳಿದ್ದಾರೆ...Body:ಚುನಾವಣಾ ಪಲಿತಾಂಶದ ನಂತರ ಸರ್ಕಾರದ ವಿಚಾರಕ್ಕೆ ಮಾತನಾಡಿದ ಅವರು, ೭ ಸೀಟ್ ಗಳು ಬಂದರೆ ಮಾತ್ರ ಸರ್ಕಾರ ಉಳಿಯುತ್ತೆ ಇಲ್ಲವಾದ್ರೆ ಬೇರೆ ಡೆವಲಪ್‌ಮೆಂಟ್ ನಡೆಯತ್ತೆ. ಜನರಿಗೆ ಸರ್ಕಾರ ಬೀಳಬಾರದು ಎಂಬ ಆಸೆ ಇದೆ ಆ ಹಿನ್ನೆಲೆ ಏನಾದ್ರು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಸರ್ಕಾರ ಬೀಳಬಾರದು ಎನ್ನುವ ಮಾತನ್ನು ಕೂಡಾ ದೇವೆಗೌಡರು ನಿನ್ನೆನೆ ಹೇಳಿದ್ದಾರೆ. ಸಿದ್ದರಾಮಯ್ಯನ ಜೊತೆ ಸೇರಿ ಕಾಂಗ್ರೆಸ್ ಜೊತೆ ಕೈ ಜೊಡಿಸುವ ಮನಸ್ಸು ದೇವೆಗೌಡರಿಗೆ ಇಲ್ಲ, ಪಲಿತಾಂಶ ಬಂದ ನಂತರ ಎಲ್ಲಾ ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ.

ಅತ್ಯಾಚಾರ ಆರೋಪಿಗಳ ಎನ್ಕೌಂಟರ್ ವಿಚಾರಕ್ಕೆ ಮಾತನಾಡಿದ ಅವರು, ಎನ್ ಕೌಂಟರ್ ಮಾಡಿದ್ದು ಒಳ್ಳೆಯ ವಿಚಾರ ಹೆಣ್ಣು ಮಕ್ಕಳ ಮೇಲೆ ಈ ರೀತಿ ನಡೆದುಕೊಂಡವರನ್ನು ಗಲ್ಲಿಗೇರಿಸಲೇ ಬೇಕು. ನ್ಯಾಯಾಲಯಗಳು ಇಂತವರನ್ನು ಬಹಳ ದಿನಾ ಇಟ್ಟುಕೊಳ್ಳಬಾರದು ಎನ್ಕೌಂಟರ್ ಮಾಡಿದ್ದು ಸರಿಯಾದ ಕ್ರಮ ಧಾರವಾಡದಲ್ಲಿ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ...

ಬೈಟ್: ಬಸವರಾಜ್ ಹೊರಟ್ಟಿ, ಮಾಜಿ‌ ಸಭಾಪತಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.