ಹುಬ್ಬಳ್ಳಿ : ಡಿ ಕೆ ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರು ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಶಾಸಕ ಜಮೀರ್ ಅಹ್ಮದ್ ಖಾನ್ ಅವರು, ನನ್ನ ಬಾಯಿ ಮುಚ್ಚೋದು ನಾನು ಸತ್ತ ಮೇಲೆನೆ. ನನ್ನ ಬಾಯಿ ಮುಚ್ಚೋಕೆ ಸಾಧ್ಯ ಇಲ್ಲ. ನಾನು ಪಕ್ಷ ಪೂಜೆನೂ ಮಾಡ್ತಿನಿ, ಅದರ ಜೊತೆ ವ್ಯಕ್ತಿ ಪೂಜೆನೂ ಮಾಡ್ತಿನಿ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಒಕ್ಕಲಿಗರ ಬಗ್ಗೆ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ನಂಗು ನಮ್ಮ ಜಾತಿಯವರಿಗಿಂತ ಒಕ್ಕಲಿಗರು ಬಹಳ ಆತ್ಮಿಯರಿದ್ದಾರೆ. ಸ್ವಾಮೀಜಿಯವರು ಅಸಮಾಧಾನ ಮಾಡಿಕೊಂಡಿದ್ದು ನಂಗೆ ಗೊತ್ತಿಲ್ಲ. ಅವರೇನಾದರು ಹೇಳಿದರೆ ನಾನು ಮಾತನಾಡಬಹುದಿತ್ತು ಎಂದರು.
ರಾಜಕೀಯದಲ್ಲಿ ಲೆವೆಲ್ ಗುರುತಿಸೋದು ಜನ. ನಮ್ಮ ಲೆವೆಲ್ ಜನ ಹೇಳಬೇಕು ಎಂದು ಡಿ ಕೆ ಶಿವಕುಮಾರ ಅವರಿಗೆ ಟಾಂಗ್ ನೀಡಿದ ಜಮೀರ್ ಎಐಸಿಸಿಯಿಂದಲೂ ನಂಗೆ ಸೂಚನೆ ಬಂದಿಲ್ಲ. ನಂಗ್ಯಾಕೆ ನೋಟಿಸ್ ನೀಡ್ತಾರೆ. ನಾನೇನು ತಪ್ಪು ಮಾತನಾಡಿದ್ದೇನೆ ಎಂದು ಕೇಳಿದ್ರು.
ಇದನ್ನೂ ಓದಿ : ಕಾಂಗ್ರೆಸ್ ಅಧಿಕಾರಕ್ಕೆ ತರಲು ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ: ಡಿಕೆಶಿ ಖಡಕ್ ಸಂದೇಶ