ಹುಬ್ಬಳ್ಳಿ: ಇಲ್ಲಿನ ಆಟೋ ರಿಕ್ಷಾ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಹುಬ್ಬಳ್ಳಿಯ 22 ಜನ ಆಟೋ ಚಾಲಕರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕೊರೊನಾ ತಡೆಗಟ್ಟಲು ಲಾಕ್ಡೌನ್ ಜಾರಿಯಾದ ಹಿನ್ನೆಲೆ ಪ್ರಮುಖ ರಕ್ತ ಭಂಡಾರದಲ್ಲಿ ರಕ್ತದ ಶೇಖರಣೆ ಇಲ್ಲದೇ ರೋಗಿಗಳು ಪರದಾಡುವಂತಾಗಿತ್ತು.
ಇದನ್ನು ಅರಿತ ಆಟೋ ಚಾಲಕರ ಮತ್ತು ಮಾಲಿಕರ ಸಂಘ ಸ್ವಯಂ ಸೇವಕರಾಗಿ ಬಂದು ಇಲ್ಲಿನ ನೀಲಿಜಿನ್ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ರಕ್ತ ಭಂಡಾರ ನಿಧಿಯಲ್ಲಿ ರಕ್ತದಾನ ಮಾಡಿದರು.
ಇನ್ನು ರಕ್ತದಾನ ಮಾಡಿದ ಆಟೋ ಚಾಲಕರಿಗೆ ರಕ್ತ ಭಂಡಾರ ನಿಧಿಯ ವ್ಯವಸ್ಥಾಪಕ ದತ್ತಮೂರ್ತಿ ಕುಲಕರ್ಣಿ ಮತ್ತು ಸಿಬ್ಬಂದಿ ವರ್ಗದವರು ಪ್ರಮಾಣ ಪತ್ರದ ಜೊತೆ ದಿನಸಿ ಕಿಟ್ ನೀಡಿದರು.