ಹುಬ್ಬಳ್ಳಿ : ನಗರದ ಗೋಕುಲ ರಸ್ತೆಯ ಐಡಿಬಿಐ ಬ್ಯಾಂಕ್ ಕಳ್ಳತನಕ್ಕೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯುವರಾಜ ಪಲ್ಲೇದ್ , ಕಾರ್ತಿಕ ಸಂಕನಕೊಪ್ಪ , ಅಕ್ಷಯ ಕೋಟಿ ಹಾಗೂ ನೀಲಕಂಠ ಗರಗ ಬಂಧಿತ ಆರೋಪಿಗಳು.
ಬಂಧಿತರು ಇಲ್ಲಿನ ನೆಹರು ನಗರದ ಐಡಿಬಿಐ ಬ್ಯಾಂಕ್ ಕಳ್ಳತನಕ್ಕೆ ಯತ್ನಿಸಿದರು. ಈ ವೇಳೆ ಸೈರನ್ ಆಗಿದ್ದರಿಂದ ಬಿಟ್ಟು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಗೋಕುಲ ಠಾಣೆ ಇನ್ಸ್‌ಪೆಕ್ಟರ್ ಜೆ ಎಂ ಕಾಲಿಮಿರ್ಚಿ ನೇತೃತ್ವದ ತಂಡ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಂಕ್ ಕಳ್ಳತನಕ್ಕೆ ಮೊದಲೇ ಸ್ಕೆಚ್ ಹಾಕಿದ್ದ ಕಳ್ಳರು ಆನ್‌ಲೈನ್ ಮೂಲಕ ಕೃತ್ಯಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದ್ದರು. ಟೀಶರ್ಟ್, ಮಂಕಿ ಕ್ಯಾಪ್, ಕೈಗವಸು, ಕಟರ್ ಸಹಿತ ಇತರೆ ವಸ್ತುಗಳನ್ನು ಖರೀದಿಸಿದ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ.