ETV Bharat / city

ಆನ್​​ಲೈನ್​​​​ನಲ್ಲಿ ಮದ್ಯ ಮಾರುವುದಾಗಿ ನಂಬಿಸಿ ವಂಚಿಸಲು ಯತ್ನ..ದೂರು ದಾಖಲು

author img

By

Published : Apr 11, 2020, 9:20 PM IST

Updated : Apr 11, 2020, 10:04 PM IST

ಮದ್ಯಪ್ರಿಯರನ್ನು ಟಾರ್ಗೆಟ್ ಮಾಡಿದ ವಂಚಕರು ಲಿಕ್ಕರ್ ಶಾಪ್ ಹೆಸರಿನಲ್ಲಿ ನಕಲಿ ಫೇಸ್​​ ಬುಕ್ ಖಾತೆ ಸೃಷ್ಟಿಸಿ ಆನ್​​​​​​​​ಲೈನ್​​​​ ಮೂಲಕ ಮದ್ಯ ಡೆಲಿವರಿ ಮಾಡುವುದಾಗಿ ನಂಬಿಸಲು ಯತ್ನಿಸಿದ್ದಾರೆ. ವಿಷಯ ತಿಳಿದ ಲಿಕ್ಕರ್ ಶಾಪ್ ಮಾಲೀಕರು ದೂರು ನೀಡಿದ್ದಾರೆ.

online cheating
ಆನ್​​ಲೈನ್​​​​ ವಂಚನೆ ಯತ್ನ

ಹುಬ್ಬಳ್ಳಿ: ಲಾಕ್​​ ಡೌನ್​​​​ನಿಂದ ಥಿಯೇಟರ್, ಮಾಲ್, ಹೋಟೆಲ್​​​​​​​, ಮದ್ಯದ ಅಂಗಡಿ ಎಲ್ಲಾ ಬಂದ್ ಆಗಿದೆ. ರಾಜ್ಯದ ಗಡಿಗಳೂ ಬಂದ್ ಆಗಿದ್ದು ಜನರು ಕಂಗಾಲಾಗಿದ್ದಾರೆ. ಇನ್ನು ಎಷ್ಟೋ ಮಂದಿ ಮದ್ಯಪ್ರಿಯರು ಮದ್ಯ ಸಿಗದೆ ಮಾನಸಿಕ ಖಿನ್ನತೆಯಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

online cheating
ಆನ್​​ಲೈನ್​​​​ ವಂಚನೆ ಯತ್ನ

ಹುಬ್ಬಳ್ಳಿಯ ಮನೋವೈದರೊಬ್ಬರು ಕೂಡಾ ಇತ್ತೀಚೆಗೆ ಮದ್ಯಪ್ರಿಯರ ಪರವಾಗಿ ಹೈಕೋರ್ಟಿನಲ್ಲಿ ಪಿಐಎಲ್​ ಸಲ್ಲಿಸಿ ದಂಡ ಕಟ್ಟಿ ಬಂದಿದ್ದರು. ಇನ್ನು ಮದ್ಯಪ್ರಿಯರಿಗೆ ಏನೋ ಕಳೆದುಕೊಂಡಂತೆ ಆಗಿದ್ದು ಆನ್​​ಲೈನ್​​​​ನಲ್ಲಾದರೂ ಮದ್ಯ ಮಾರಾಟ ಮಾಡುವಂತೆ ಪ್ರತಿನಿತ್ಯ ಬೇಡಿಕೆ ಇಡುತ್ತಿದ್ಧಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ವಂಚಕರು ಗೋಕುಲ್ ರಸ್ತೆಯ ತೇಜ್ ಲಿಕ್ಕರ್ ಶಾಪ್​​​​ ಹೆಸರು ಬಳಸಿಕೊಂಡು ನಕಲಿ ಫೇಸ್​​​​​ಬುಕ್ ಸೃಷ್ಟಿಸಿ ಮದ್ಯವನ್ನು ಆನ್​​ಲೈನ್ ಡೆಲಿವರಿ ನೀಡಲಾಗುವುದು ಎಂದು ಜಾಹೀರಾತು ಹರಿಯಬಿಟ್ಟಿದ್ದಾರೆ. ವಿಷಯ ತಿಳಿದ ಲಿಕ್ಕರ್ ಶಾಪ್ ಮಾಲೀಕ ಅಕ್ಷಯ್ ಪವಾರ್ ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Last Updated : Apr 11, 2020, 10:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.