ETV Bharat / city

ಹುಬ್ಬಳ್ಳಿ: ಟೈಯರ್, ಟ್ಯೂಬ್ ಕಳ್ಳತನ ಮಾಡಿದ್ದ ಆರೋಪಿಗಳು ಅಂದರ್​

author img

By

Published : Feb 6, 2021, 10:56 AM IST

ಲಕ್ಷಾಂತರ ರೂಪಾಯಿ ಮೌಲ್ಯದ ಟ್ರಕ್ಕಿನ ಟೈರ್ ಹಾಗೂ ಟ್ಯೂಬ್​ಗಳನ್ನು ಕಳವು ಮಾಡಿದ್ದ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Hubli
ಬಂಧನ

ಹುಬ್ಬಳ್ಳಿ: ಗೋಕುಲ್​ ರಸ್ತೆಯ ಇಂಡಸ್ಟ್ರೀಯಲ್ ಎಸ್ಟೇಟ್​ನಲ್ಲಿನ ಶ್ರೀ ಶಿವಶಕ್ತಿ ಎಂಟರ್ ಪ್ರೈಸಸ್ ಗೋಡೌನ್​ನಲ್ಲಿ ಟೈಯರ್, ಟ್ಯೂಬ್ ಮತ್ತು ಪೈಪ್​​ಗಳನ್ನ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗೋಕುಲ್ ರೋಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಗೋಕುಲ್​ ರಸ್ತೆಯ ಮಾರುತಿನಗರದ ಹಳ್ಳೆಪ್ಪ ದೇವಪ್ಪ ಪೂಜಾರ ಮತ್ತು ಗದಗ-ಬೆಟಗೇರಿ ನರಸಾಪುರದ ವಸೀಂ ಮಕ್ತುಮಸಾಬ್ ಸೈದಾಪೂರ ಎಂದು ಗುರುತಿಸಲಾಗಿದೆ. ಟ್ರಕ್ಕಿನ 11 ಟೈಯರ್, ಟ್ಯೂಬ್ ಹಾಗೂ ಪ್ಲ್ಯಾಪ್​ಗಳನ್ನ ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ ಅಂದಾಜು 2.10 ಲಕ್ಷ ರೂ. ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮದುವೆಯಾಗಿ ಎರಡೇ ತಿಂಗಳಿಗೆ ಮನಸ್ತಾಪ.. ಬಿ.ಟೆಕ್ ವಿದ್ಯಾರ್ಥಿನಿ ಕೊಂದು ಕಥೆ ಕಟ್ಟಿದ ಗಂಡ!

ಗೋಡೌನ್​ನ ಸಿಮೆಂಟ್ ಸೀಟಿನ ನಟ್-ಬೋಲ್ಟ್ ಬಿಚ್ಚಿ ಗೋಡೌನ್​ನಲ್ಲಿ ಇಳಿದು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಆರೋಪಿಗಳಿಗೆ ಸಹಕಾರ ನೀಡಿರುವ ಇನ್ನುಳಿದ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದು, ಕಳ್ಳತನವಾಗಿರುವ ಇನ್ನುಳಿದ ವಸ್ತುಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.