ಹುಬ್ಬಳ್ಳಿ: ಸ್ಮಶಾನ ಕಾಯುವ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಹುಬ್ಬಳ್ಳಿಯಲ್ಲಿ ಮತ್ತಷ್ಟು ಆತಂಕದ ವಾತಾವರಣ ನಿರ್ಮಾಣವಾಗಿದೆ.
363 ನೇ ಸಂಖ್ಯೆಯ ಸೋಂಕಿತ ಹುಬ್ಬಳ್ಳಿಯ ಕಮರಿಪೇಟೆಯ ಕರಡಿ ಓಣಿಯ 63 ವರ್ಷದ ವ್ಯಕ್ತಿಯಾಗಿದ್ದಾನೆ. ಪರಿಣಾಮ ಸೋಂಕಿತನ ಸಂಬಂಧಿಕರು ಹಾಗೂ ಆಪ್ತರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದೆ. ಕೊರೊನಾ ಸೋಂಕಿತ 363 ರ ಸಂಪರ್ಕದಲ್ಲಿದ್ದವರನ್ನು ಮುಂಜಾಗ್ರತಾ ಕ್ರಮವಾಗಿ ಧಾರವಾಡ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ನಿರ್ದೇಶನದ ಮೇರೆಗೆ ತಪಾಸಣೆಗೆ ಹಾಗೂ ಹೋಮ್ ಕ್ವಾರಂಟೈನ್ಗೆ ಕರೆದುಕೊಂಡು ಹೋಗಲಾಯಿತು.
ಸೋಂಕಿತ ವ್ಯಕ್ತಿ ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಏ. 9 ರಂದು ಶಬ್ ಎ ಬರಾತ್ ಹಬ್ಬದ ಸಂದರ್ಭದಲ್ಲಿ ಸಮುದಾಯದ ಕೆಲವು ಪ್ರಮುಖರು ಈತನ ಜೊತೆ ಸಂಪರ್ಕ ಹೊಂದಿದ್ದರು. ಹೀಗಾಗಿ ಆತನೊಂದಿಗೆ ಸಂಪರ್ಕದಲ್ಲಿದ್ದ ಸುಮಾರು 20 ಜನರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದ್ರೆ, ಇನ್ನೂ ಕೆಲವರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ.