ETV Bharat / city

ಎರಡು ಬಾರಿ ಪ್ಲಾಸ್ಮಾ ದಾನ ಮಾಡಿ ಮಾದರಿಯಾದ ಅನಂತಕುಮಾರ

ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಹುಬ್ಬಳ್ಳಿಯ ಅನಂತಕುಮಾರ ಬ್ಯಾಡಗಿ ಎಂಬುವವರು ಎರಡು ಬಾರಿ ಪ್ಲಾಸ್ಮಾ ದಾನ ಮಾಡುವ ಮ‌ೂಲಕ ಇತರರಿಗೆ ಮಾದರಿಯಾಗಿದ್ದಾರೆ.

Ananthakumara voluntarily donates plasma twice
ಸ್ವಯಂಪ್ರೇರಿತವಾಗಿ ಎರಡು ಬಾರಿ ಪ್ಲಾಸ್ಮಾ ದಾನ ಮಾಡಿ ಮಾದರಿಯಾದ ಅನಂತಕುಮಾರ
author img

By

Published : Aug 20, 2020, 10:26 PM IST

ಹುಬ್ಬಳ್ಳಿ: ಕೊರೊನಾ ಗೆದ್ದು ಬಂದ ವ್ಯಕ್ತಿಯೊಬ್ಬರು ಇತರೆ ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡುವ ಮ‌ೂಲಕ ಮಾನವೀಯತೆ ಮೆರೆದಿದ್ದಾರೆ.

ಸ್ವಯಂಪ್ರೇರಿತವಾಗಿ ಎರಡು ಬಾರಿ ಪ್ಲಾಸ್ಮಾ ದಾನ ಮಾಡಿ ಮಾದರಿಯಾದ ಅನಂತಕುಮಾರ

ನಗರದ ಅನಂತಕುಮಾರ ಬ್ಯಾಡಗಿ ಎಂಬುವವರು ಎರಡು ಬಾರಿ ಪ್ಲಾಸ್ಮಾ ದಾನ ಮಾಡುವ ಮ‌ೂಲಕ ಮಾದರಿಯಾಗಿದ್ದಾರೆ. ಇವರಿಗೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕೊರೊನಾ ಸೋಂಕು ದೃಢಪಟ್ಟಿತ್ತು. ಸದ್ಯ, ಸೋಂಕಿನಿಂದ ಗುಣಮುಖರಾಗಿರುವ ಅನಂತಕುಮಾರ ಅವರು, ಸ್ವಯಂಪ್ರೇರಿತವಾಗಿ ಎರಡು ಪ್ಲಾಸ್ಮಾ ದಾನ ಮಾಡಿದ್ದಾರೆ.

ಆಗಸ್ಟ್ 6ರಂದು ನಗರದ ಲೈಫ್​ಲೈನ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡಿದ್ದು, ಇಂದು ಮತ್ತೆ ಹುಬ್ಬಳ್ಳಿಯ ಆರ್.ಬಿ.ಪಾಟೀಲ ಆಸ್ಪತ್ರೆಯಲ್ಲಿ ದಾನ ಮಾಡಿದ್ದಾರೆ. ಮೂಲತಃ ಗುತ್ತಿಗೆದಾರರಾದ ಅನಂತಕುಮಾರ ಅವರು, ವೈದ್ಯರ ಉತ್ತಮ ಸೇವೆಯಿಂದ ನಾನು ಗುಣಮುಖನಾಗಿದ್ದೇನೆ. ಇತರೆ ಸೋಂಕಿತರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಲು ನಿರ್ಧರಿಸಿದ್ದೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.