ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದ ಪ್ರಕಾಶ ದೇಶದ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪೊಲೀಸರು ಬಂಧಿಸಿದ್ದಾರೆ. ಸುರೇಶ ದೇಶದ, ಕಲ್ಲಪ್ಪ ದೇಶದ ಹಾಗೂ ವಾಸಪ್ಪ ದೇಶದ ಎಂಬುವವರು ಬಂಧಿತರು. ಜಮೀನಿನ ಕಾರಣಕ್ಕೆ ಮೇ 10ರಂದು ಪ್ರಕಾಶ ದೇಶದ ಅವರ ಕೊಲೆ ನಡೆದಿತ್ತು.
ಕೊಲೆಯಾದ ಪ್ರಕಾಶ ದೇಶದ, ಕೊಲೆ ಆರೋಪಿಗಳ ಸಂಬಂಧಿಯಾಗಿದ್ದರು. 5 ಎಕರೆ ಜಮೀನಿನಲ್ಲಿ ಉಳುಮೆ ವಿಚಾರಕ್ಕೆ ಇವರ ನಡುವೆ ಕಲಹವಾಗಿದೆ. ಈ ವಿಚಾರವಾಗಿ ಕೌಟುಂಬಿಕ ಕಲಹಗಳು ನಡೆಯುತ್ತಲೇ ಇತ್ತು.
ಮೇ 10ರಂದು ಬೈಕ್ನಲ್ಲಿ ಹೋಗುತ್ತಿದ್ದ ಪ್ರಕಾಶ್ನನ್ನು ಅಡ್ದಗಟ್ಟಿ ತಲ್ವಾರ ಹಾಗೂ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ದೆಹಲಿಯ ಡೈರಿ ಫಾರ್ಮ್ಗೆ ಬೆಂಕಿ ತಗುಲಿ 20 ಗೋವುಗಳ ಸಜೀವ ದಹನ