ಹುಬ್ಬಳ್ಳಿ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿರುವ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಭ್ರಷ್ಟಾಚಾರದ ಆರೋಪವೊಂದು ಕೇಳಿ ಬರುತ್ತಿದೆ. ಮಂಜೂರಾತಿ ಇಲ್ಲದ ಹುದ್ದೆಯಲ್ಲಿ ಏಳು ವರ್ಷಗಳಿಂದ ಒಬ್ಬ ಅಧಿಕಾರಿ ಕಾರ್ಯ ನಿರ್ವಹಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ರಾಜ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿದ್ದು, ಸರ್ಕಾರ ನಿರ್ವಹಣೆ ಮಾಡುತ್ತಿರುವುದು ತಿಳಿದಿರುವ ಸಂಗತಿ, ಅದರಲ್ಲೂ ಮಂಜೂರೇ ಇಲ್ಲದ ಸ್ಪೆಷಲ್ ಆಫೀಸರ್ ಫಾರ್ ಎಂಡಿ ಎಂಬ ಹುದ್ದೆಯಲ್ಲಿ ಒಬ್ಬರು ಖಾರ್ಯ ನಿರ್ವಹಿಸುತ್ತಿದ್ದಾರೆ. ಅರ್ಥಿಕ ಸಂಕಷ್ಟ ಸರಿದೂಗಿಸಲು ಹುದ್ದೆ ಕಡಿತಕ್ಕೆ ವಾಯುವ್ಯ ಸಾರಿಗೆ ಸಂಸ್ಥೆ ಮುಂದಾಗಿದೆ. ಆಡಳಿತ ವೆಚ್ಚಕ್ಕೆ ಕಡಿವಾಣ ಹಾಕಲು 211 ಹುದ್ದೆಗೆ ಕತ್ತರಿ ಹಾಕಲು ಪ್ಲಾನ್ ಮಾಡಿದೆ ಎನ್ನಲಾಗ್ತಿದೆ.
ಸರ್ಕಾರದಿಂದ ಮಂಜೂರಾತಿ ಇಲ್ಲದೆ ಹುದ್ದೆಯಲ್ಲಿ ಕೆಲ ಅಧಿಕಾರಿಗಳು ಕೆಲಸ ನಿರ್ವಹಣೆ ಮಾಡುತ್ತಿರುವುದು ಯಾವ ಲೆಕ್ಕ. ಇದು ಭ್ರಷ್ಟ ಅಧಿಕಾರಿಗಳಿಗೆ ಲೂಟಿಗೆ ಅವಕಾಶ ಮಾಡಿಕೊಡಲು ಈ ತಂತ್ರವಾ? ಎಂದು ಪ್ರಶ್ನಿಸಿ ಲಿಖಿತ ದಾಖಲೆಯ ಮೂಲಕ ಸಾರಿಗೆ ಸಂಸ್ಥೆಯ ರಾಜೇಂದ್ರ ಕಠಾರಿಯಾಗೆ ಹುಬ್ಬಳ್ಳಿ ವಕೀಲರು ದೂರು ನೀಡಿದ್ದಾರೆ.
ಸ್ಪೆಷಲ್ ಆಫೀಸರ್ ಫಾರ್ ಎಂಡಿ ಎಂಬ ಹುದ್ದೆಯಲ್ಲಿ ಕೆ ಎಲ್ ಕುಮಾರಸ್ವಾಮಿ ಎಂಬುವವರು ಕಳೆದ ಏಳು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂ.ಡಿ ಇಲ್ಲದ ವೇಳೆ ಇವರೇ ಕಡತಗಳಿಗೆ ಸಹಿ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಸಾರಿಗೆ ಸಂಸ್ಥೆಯ ಎಂ ಡಿ ಎಸ್ ಭರತ ಅವರನ್ನು ಕೇಳಿದರೆ ಆರೋಪವನ್ನು ತಳ್ಳಿ ಹಾಕುತ್ತಿದ್ದಾರೆ. ಅಲ್ಲದೇ ಸರಿಯಾದ ಸಾಕ್ಷಿ ಸಮೇತ ಸಿಕ್ಕರೆ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ.
ಇದನ್ನೂ ಓದಿ : ಅಸಿಸ್ಟೆಂಟ್ ಪ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದೇಗೆ? ಚಾರ್ಜ್ ಶೀಟ್ನಲ್ಲಿ ಪಿನ್ ಟು ಪಿನ್ ಮಾಹಿತಿ