ETV Bharat / city

ಸರ್ಕಾರಿ ‌ಕಚೇರಿಯಲ್ಲಿ ಏಜೆಂಟ್​ ಹಾವಳಿ: ಹಣ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್ - Agent plagued

ಕಲಘಟಗಿ ಸರ್ಕಾರಿ ‌ಕಚೇರಿಯಲ್ಲಿ ಏಜೆಂಟ್​ಗಳ ಹಾವಳಿ ಹೆಚ್ಚಾಗಿದ್ದು, ಕಾರ್ಮಿಕ ಕಾರ್ಡ್​ ಮಾಡಿಕೊಡಲು ರಾಜಾರೋಷವಾಗಿ ದುಪ್ಪಟ್ಟು ಹಣ ಪೀಕುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ.

Agent plagued in kalghatgi government office
ಅಧಿಕಾರಿಗಳು ಹಣ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್
author img

By

Published : Jul 16, 2021, 12:00 PM IST

ಹುಬ್ಬಳ್ಳಿ: ಕಲಘಟಗಿ ಕಾರ್ಮಿಕ ಇಲಾಖೆಯಲ್ಲಿ ಏಜೆಂಟ್​ ಹಾವಳಿ ಜೋರಾಗಿದೆ. ಕಾರ್ಮಿಕ‌ ಇಲಾಖೆ ಕಾರ್ಡ್ ಮಾಡಿಕೊಡಲು ಹಣ ವಸೂಲಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಕಾರ್ಮಿಕರಿಗೆ ಸರ್ಕಾರ ‌ಹಲವು ಸೌಲಭ್ಯಗಳನ್ನು ಘೋಷಣೆ ಮಾಡಿದೆ. ಆದರೆ, ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಲು ಕಾರ್ಮಿಕ ಕಾರ್ಡ್ ಅವಶ್ಯಕ. ಇದನ್ನೇ ಕೆಲವು ಏಜೆಂಟ್​ಗಳು ಬಂಡವಾಳ ಮಾಡಿಕೊಂಡು ಕಾರ್ಮಿಕರಿಂದ ಹಣ ವಸೂಲಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಅಧಿಕಾರಿಗಳು ಹಣ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್

ಒಂದು ಕಾರ್ಮಿಕರ ಕಾರ್ಡ್ ಮಾಡಲು ಸರ್ಕಾರದ ವತಿಯಿಂದ 25-30 ರೂ. ಶುಲ್ಕವಿದೆ. ಆದರೆ ಒಂದೊಂದು ಕಾರ್ಡ್‌ಗೆ 600-700 ರೂ.ಗಳನ್ನು ರಾಜಾರೋಷವಾಗಿ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಬಡ ಕಾರ್ಮಿಕರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡಾ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.