ETV Bharat / city

ನವಲಗುಂದ : ಹಣದ ಬೇಡಿಕೆ ಇಟ್ಟ ತಲಾಠಿ ಮೇಲೆ ಎಸಿಬಿ ದಾಳಿ - ಪರಿಹಾರ ನೀಡಲು ಹಣಕ್ಕೆ ಬೇಡಿಕೆ

ಸಂತ್ರಸ್ತರಿಗೆ ಮಳೆಯಿಂದ ಬಿದ್ದ ಮನೆಗಳ ವರದಿ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಆರೋಪಿಯ ವಿಚಾರಣೆ ಮುಂದುವರೆದಿದೆ..

acb-ride
ತಲಾಠಿ ಮೇಲೆ ಎಸಿಬಿ ದಾಳಿ
author img

By

Published : Dec 3, 2021, 7:22 PM IST

ನವಲಗುಂದ : ಅಕಾಲಿಕ ಮಳೆಯಿಂದ ಕುಸಿದ ಮನೆಗೆ ಪರಿಹಾರ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ತಲಾಠಿಯನ್ನು ಎಸಿಬಿ ಅಧಿಕಾರಿಗಳು ಸಾಕ್ಷಿ ಸಮೇತ ವಶಕ್ಕೆ ಪಡೆದ ಘಟನೆ ನಗರದಲ್ಲಿ ನಡೆದಿದೆ.

ನವಲಗುಂದದ ತಲಾಠಿ ಪ್ರದೀಪ ಬಸವಂತಕರ ಮಳೆಗೆ ಮನೆ ಬಿದ್ದ ವರದಿ ನೀಡಲು ಸಂತ್ರಸ್ತರೊಬ್ಬರಿಂದ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ ₹15 ಸಾವಿರಕ್ಕೆ ಒಪ್ಪಂದವಾಗಿತ್ತು. ಇಂದು ದೂರಿನ ಮೇರೆಗೆ ದಾಳಿ ನಡೆಸಿದ ಎಸಿಬಿ, ತಲಾಠಿ ಹಣ ಪಡೆಯುವ ಸಂದರ್ಭದಲ್ಲಿ ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಸಂತ್ರಸ್ತರಿಗೆ ಮಳೆಯಿಂದ ಬಿದ್ದ ಮನೆಗಳ ವರದಿ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಆರೋಪಿಯ ವಿಚಾರಣೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.