ETV Bharat / city

ಧಾರವಾಡದ ಸರ್ಕಾರಿ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ: ಲಕ್ಷಾಂತರ ರೂ. ನಗದು ಪತ್ತೆ

ಧಾರವಾಡದ ಅಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಕಚೇರಿ ಹಾಗೂ ಕಚೇರಿ ವ್ಯವಸ್ಥಾಪಕ ಶಿವಶಂಕರ ಹಿರೇಮಠ ಅವರ ಮನೆ ಮೇಲೆ ಎಸಿಬಿ ದಾಳಿ ನಡೆದಿದ್ದು, ಒಟ್ಟು 5.61 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ACB raid on government office at darawada
ಸರ್ಕಾರಿ ಕಚೇರಿ ಮೇಲೆ ಎಸಿಬಿ ದಾಳಿ
author img

By

Published : Oct 31, 2021, 1:56 PM IST

ಧಾರವಾಡ: ಸರ್ಕಾರಿ ಕಚೇರಿ ಮೇಲೆ ಎಸಿಬಿ ದಾಳಿ ನಡೆದ ಘಟನೆ ಧಾರವಾಡದಲ್ಲಿ ಶನಿವಾರ ರಾತ್ರಿ ನಡೆದಿದೆ. ಲಕ್ಷಾಂತರ ರೂಪಾಯಿ ಲಂಚದ ಹಣ ಪತ್ತೆಯಾಗಿದೆ.

ಧಾರವಾಡದ ಅಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಚೇರಿ ವ್ಯವಸ್ಥಾಪಕ ಶಿವಶಂಕರ ಹಿರೇಮಠ ಬಳಿ ಹಣ ಪತ್ತೆಯಾಗಿದ್ದು, ಕಚೇರಿ ಮತ್ತು ಹಿರೇಮಠ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಒಟ್ಟು 5.61 ಲಕ್ಷ ರೂಪಾಯಿ ಹಣ ಪತ್ತೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ACB raid on government office at darawada
ಕಚೇರಿ ವ್ಯವಸ್ಥಾಪಕ ಶಿವಶಂಕರ ಹಿರೇಮಠ ಬಳಿ ಹಣ ಪತ್ತೆ

ಜಿಲ್ಲಾಧಿಕಾರಿ ಕಚೇರಿ ಕಂಪೌಂಡ್‌ನಲ್ಲಿರುವ ಆಹಾರ ಇಲಾಖೆಯ ಕಚೇರಿ ಹಾಗೂ ಸಿಬಿ‌ ನಗರದಲ್ಲಿರುವ ಹಿರೇಮಠ ನಿವಾಸದ ಮೇಲೆ ದಾಳಿ ಮಾಡಿ, ಕಚೇರಿಯಲ್ಲಿ 1.15 ಲಕ್ಷ ರೂ. ಮನೆಯಲ್ಲಿ 4.46 ಲಕ್ಷ ರೂ. ನಗದನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಕ್ರೆಡಿಟ್ ಲಿಮಿಟ್ ಹೆಚ್ಚಿಸುವುದಾಗಿ ನಂಬಿಸಿ ಮಂಗಳೂರಿನ ವ್ಯಕ್ತಿಗೆ 6.94 ಲಕ್ಷ ರೂ. ವಂಚನೆ

ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ದಾಳಿ ನಡೆಸಲಾಗಿದ್ದು, ನ್ಯಾಯ ಬೆಲೆ ಅಂಗಡಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪ ಹಿರೇಮಠ ಅವರ ವಿರುದ್ಧ ಕೇಳಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.